ಕೊಡವ ಸಮಾಜದ ಸಭಾಂಗಣದ ತುಂಬೆಲ್ಲಾ ಆಕರ್ಷಕ ಸೀರೆ, ವಸ್ತ್ರ, ಮಕ್ಕಳ ಉಡುಪು, ಬೆಡ್‌ಸ್ಪ್ರೆಡ್, ಟೇಬಲ್ ಹಾಸು, ಚೂಡಿದಾರ್... ಮಹಿಳೆಯರನ್ನು ಅಧಿಕವಾಗಿ ಆಕರ್ಷಿದವು. ಬಾಳೆಲೆಯ ಥಾಯ್ಲೆಂಡ್ ಕ್ಲೇ ಬಳಸಿ ತಯಾರಿಸಲಾದ ಹ್ಯಾಂಡ್ ಮೇಡ್ ಫ್ಲವರ್ಸ್, ಪಾಲಿಬೆಟ್ಟದ ಕುಪ್ಪಂಡ ದೀಪಾಲಿ ಅವರು ಪ್ಯಾಕಿಂಗ್ ಟೇಪ್ ಮೂಲಕ ತಯಾರಿಸಿದ ಚೆಟ್ಟಿನಾಡ್ ಬ್ಯಾಗ್ ಗಮನ ಸೆಳೆಯಿತು.
ಪಾಲಿಬೆಟ್ಟ ವಿಮಾ ಮತ್ತು ತಂಡ ಥಾಯ್ ಕಹಿ ಹುಳಿ ಪಾಕ, ಪೀಚೆಕತ್ತಿ, ವಸ್ತ್ರ ಕವರ್, ಕೊಡಗಿನ ಹಕ್ಕಿಗಳ ಫೋಟೋ ಕಾರ್ಡ್ಸ್, ಕೊಡಗಿನ ಬೀಟೆ ಮರ ಟ್ರೇ ಇತ್ಯಾದಿ, ಬಾಡಗ ಮಹಿಳಾ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಸ್ಥೆಯ ಮಾಯಾ ಉತ್ತಯ್ಯ ಅವರು ಕೊಲ್ಕೋತ್ತಾ ಸೀರೆ, ಜ್ಯೂಟ್ ಬ್ಯಾಗ್, ಟೇಬಲ್ ರನ್ನರ್ಸ್ ಮಳಿಗೆ ಮೂಲಕ ಗಮನ ಸೆಳೆದರು.
ಕೊಡವ ಸಮಾಜದ ಹೊರಭಾಗ ವಿವಿಧ ಕಂಪನಿಗಳ ಐಷಾರಾಮಿ ಕಾರುಗಳ ಪ್ರದರ್ಶನ ಗಮನ ಸೆಳೆಯಿತು. ಇದರೊಂದಿಗೆ ಕನ್ನಡಕ ಮಳಿಗೆ, ಸಿಸಿಟಿವಿ ಕ್ಯಾಮರಾ ಮಳಿಗೆಗಳಿದ್ದವು.
ಅಮ್ಮತ್ತಿ ಮಂಡೇಪಂಡ ರೇಶ್ಮಾ ಸುಬ್ರಮಣಿ, ಬಾಡಗ ಕೋಳೇರ ಲೀಲಾ ಅಪ್ಪಣ್ಣ, ಕಂಡ್ರತಂಡ ಕೃಶ್ಮಾದೇವಯ್ಯ, ಮಾಪಂಗಡ ಕೃತ್ತಿಕಾ, ಕುಟ್ಟದ ತೀತಿರ ಸುಜಯ್, ವಿರಾಜಪೇಟೆ ಕಂಬೀರಂಡ ದಿವ್ಯಾ ಮುತ್ತಪ್ಪ ಅವರ ಮಳಿಗೆಗಳು ಗಮನ ಸೆಳೆಯಿತು.
ಟಿ. ಶೆಟ್ಟಿಗೇರಿ ಮಹಿಳೆಯರ ಪೈಟಿಂಗ್, ಗೊಂಬೆಗಳು, ಗೋಣಿಕೊಪ್ಪಲು ಬೆರ್ರೀ ಟೂ ಬೀನ್ಸ್ ಅವರ ಬೆಂಗಳೂರು- ಚೆನ್ನೈ ನ ವಿಶೇಷ ವಸ್ತ್ರ ಮಳಿಗೆ ಇದ್ದವು. ನಡಿಕೇರಿಯ ಶ್ರೀ ಗೋವಿಂದ ಸ್ವಾಮಿ ದೇವಸ್ಥಾನ ಅಭಿವೃದ್ಧಿಗೆ ಹಣ ಸಂಗ್ರಹಿಸಲು ಲಾಭ ಬೇಡ, ನಷ್ಟವೂ ಇಲ್ಲ ಎಂಬಂತೆ ಲೀಲಾ ಅಪ್ಪಣ್ಣ ಅವರು ಬಾಳೆ, ತೆಂಗಿನಕಾಯಿ ಮಾರಾಟದಲ್ಲಿ ತೊಡಗಿದ್ದರು. ಬೀರುಗದ ಎಂ.ಪಿ.ಅಯ್ಯಪ್ಪ ಅವರು ರು. 500 ದರಕ್ಕೆ 20 ಬಾಟಲ್ ಕಾಚಂಪುಳಿ (ಪಣಪ್ಪುಳಿ) ತಂದಿದ್ದು, ಎಲ್ಲವೂ ಮಾರಾಟವಾಯಿತು.
ಆರ್ಟ್ ಆಫ್ ಲೀವಿಂಗ್ ಮಡಿಕೇರಿ ಇವರ ಮಳಿಗೆ ಕೆಮಿಕಲ್ ಫ್ರೀ ಸಾಬೂನು, ಅಗರಬತ್ತಿ, ಮಸಾಲ ಪೌಡರ್, ಶ್ಯಾಂಪೂ, ಫೇಸ್‌ವಾಷ್, ಹರ್ಬಲ್ ಟೀ ಇತ್ಯಾದಿ, ಪಾಲಿಬೆಟ್ಟ ಚೆಷೈರ್ ಹೋಂ ಹಾಗೂ ಸ್ವಸ್ಥ ಸಂಸ್ಥೆಯ ಉತ್ಪನ್ನಗಳು ವಿಶೇಷ ಗಮನ ಸೆಳೆದವು.
Advertisement