ಕುಶಾಲನಗರ: ತಿಮ್ಮಣ್ಣನ ಪ್ರಕರಣದಿಂದ ಪಾಠ ಕಲಿತಿರುವ ಕುಶಾಲನಗರ ಅಧಿಕಾರಿಗಳನ್ನು ಮೃತ್ಯುಕೂಪದಿಂದ ಮಕ್ಕಳನ್ನು ಪಾರು ಮಾಡಿದ್ದಾರೆ.
ಇಲ್ಲಿಗೆ ಸಮೀಪದ ಕೊಪ್ಪ ಗ್ರಾಮದ ಗುಡ್ಡೇನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಆರು ತಿಂಗಳ ಹಿಂದೆ ಸರ್ಕಾರಿ ಯೋಜನೆಯಡಿಯಲ್ಲಿ ಕೊಳವೆ ಬಾವಿ ಕೊರೆಸಲಾಗಿತ್ತು. ನೀರು ದೊರೆಯದೆ ವಿಫಲವಾದ್ದರಿಂದ ಮುಚ್ಚದೆ ಹಾಗೇ ಬಿಡಲಾಗಿತ್ತು. ಅದರ ಸುತ್ತು ಹುಲ್ಲು ಬೆಳೆದು ಈ ಬಾವಿ ಮುಚ್ಚಿ ಹೋಗಿದ್ದು, ಇದರ ಸನಿಹದಲ್ಲೇ ಅಂಗನವಾಡಿ ಇದೆ. ಪಕ್ಕದಲ್ಲಿ ಒಂದರಿಂದ ನಾಲ್ಕನೇ ತರಗತಿ ತನಕದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಹುಲ್ಲಿನ ನಡುವೆ ಮಕ್ಕಳು ಕಾಲಿಟ್ಟು ಬಾವಿಗೆ ಬೀಳುವ ಅಪಾಯ ಇದ್ದೇಇತ್ತು.
ಮನವಿಗೆ ಸ್ಪಂದನೆಯಿಲ್ಲ: ಈ ಬಗ್ಗೆ ಅಂಗನವಾಡಿ ಸಹಾಯಕಿ ಹಾಗೂ ಪೋಷಕರು, ಸಂಬಂಧಿಸಿದ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಅಪಾಯಕಾರಿ ಕೊಳವೆ ಬಾವಿ ಮುಚ್ಚಲು ಸಾಕಷ್ಟು ಸಲ ಮನವಿ ಮಾಡಿದ್ದರು.
ಅಧಿಕಾರಿಗಳಿಂದ ಯಾವುದೇ ರೀತಿಯ ಸ್ಪಂದನೆ ದೊರಕಿಲ್ಲ. ಸ್ಥಳೀಯ ಪಂಚಾಯಿತಿ ಅಧಿಕಾರಿಗಳಿಗೂ ಈ ವಿಚಾರದಲ್ಲಿ ಕಿವುಡಾಗಿದ್ದರು. ಆದರೆ, ಮಾಧ್ಯಮಗಳಲ್ಲಿ ಮೂರು ದಿನಗಳಿಂದ ಬಾಗಲಕೋಟೆಯ ಬೋರ್ವೆಲ್ ದುರಂತದ ಬಗ್ಗೆ ಮಾಹಿತಿ ತಿಳಿದ ಸ್ಥಳೀಯ ಕರ್ನಾಟಕ ಕಾವಲುಪಡೆ ಅಪಾಯಕಾರಿ ಬೋರ್ವೆಲ್ ಬಾವಿಗೆ ಭಾರಿ ಗಾತ್ರದ ಕಲ್ಲುಗಳನ್ನು ತುಂಬಿಸಿ, ಮುಚ್ಚುವ ಕ್ರಮ ಕೈಗೊಂಡಿದೆ.
Advertisement