ಕುಶಾಲನಗರ: ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯ ರೈತರಿಗೆ ಬೇಸಿಗೆ ಬೆಳೆಗೆ ನೀರು ಹರಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಜಲಾಶಯದಲ್ಲಿ 4 ಟಿಎಂಸಿ ನೀರಿಯ ಪ್ರಮಾಣವನ್ನು ಕಾಯ್ದುಕೊಳ್ಳುವಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಹಾರಂಗಿ ಯೋಜನಾ ವೃತ್ತದ ನೀರು ಬಳಕೆದಾರರ ಸಂಘದ ಮಹಾಮಂಡಳ ಅಧ್ಯಕ್ಷ ಎನ್.ಸಿ.ಚೌಡೇಗೌಡ ಆಗ್ರಹಿಸಿದ್ದಾರೆ. ಅವರು ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಹುಣಸೂರು ಮತ್ತು ಪಿರಿಯಾಪಟ್ಟಣ ತಾಲೂಕು ವ್ಯಾಪ್ತಿಯ ಕೆರೆ ಕಟ್ಟೆಗಳನ್ನು ತುಂಬಿಸುವ ಸಲುವಾಗಿ ಈಗಾಗಲೇ ಜಲಾಶಯದಿಂದ 500 ಕ್ಯುಸೆಕ್ ನೀರನ್ನು ಕಾಲುವೆಗಳ ಮೂಲಕ ಹೊರಬಿಡಲಾಗಿದೆ ಎಂದ ಅವರು ಇನ್ನು 10 ದಿನಗಳಲ್ಲಿ ಈ ವ್ಯಾಪ್ತಿಯ ಕರೆಕಟ್ಟೆಗಳು ತುಂಬಿಕೊಳ್ಳಲಿವೆ ಎಂದಿದ್ದಾರೆ. ರೈತರು ಎಲ್ಲವನ್ನೂ ಸರ್ಕಾರದಿಂದಲೇ ನಿರೀಕ್ಷೆ ಮಾಡದೆ ನೀರಿನ ಸದ್ಬಳಕೆ ಬಗ್ಗೆ ಎಚ್ಚರ ವಹಿಸುವುದು ಅವಶ್ಯಕವಾಗಿದೆ ಎಂದು ತಿಳಿಸಿದ್ದಾರೆ. ಈ ಸಂದರ್ಭ ಮಹಾಮಂಡಳದ ಉಪಾಧ್ಯಕ್ಷ ದೇವರಾಜ್, ಇತರರು ಇದ್ದರು.
Advertisement