ಸುಂಟಿಕೊಪ್ಪ: ಕೆದಕಲ್, ಮೊದ್ದೂರು, ಹಾಲೇರಿ ಗ್ರಾಮಗಳಲ್ಲಿ ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ನಿತ್ಯವು ಕೃಷಿಕರು ಬೆಳೆದ ಕೃಷಿ ಫಸಲನ್ನು ತಿಂದು ಧ್ವಂಸಗೊಳಿಸುತ್ತಿದೆ. ನಿರೀಕ್ಷಿತ ಪ್ರಮಾಣದಲ್ಲಿ ಕಾಮಗಾರಿ ಕೈಗೆತ್ತಿಕೊಂಡಿಲ್ಲ ಪೂರಕವಾದ ಯೋಜನೆಗಳಿಲ್ಲ ಎಂದು ಗ್ರಾಮಸ್ಥರು ಗ್ರಾಮ ಸಭೆಯಲ್ಲಿ ಪಂಚಾಯಿತಿ ಆಡಳಿತ ಮಂಡಳಿ ವಿರುದ್ಧ ಅಸಾಮಾಧನ ವ್ಯಕ್ತಪಡಿಸಿದರು.
ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಸಭೆಯು ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಧುನಾಗಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮೊದ್ದರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯು ಮುರಿದು ಬಿದಿದ್ದು ಮುಂದಿನ ದಿನಗಳಲ್ಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಸೇತುವೆಯೇ ಇಲ್ಲದಂತಾಗುತ್ತದೆ. ಕೂಡಲೇ ಸೇತುವೆ ದುರಸ್ತಿ ಕಾಮಗಾರಿಯನ್ನು ಕೈಗೊಳ್ಳುವಂತೆ ಇಲ್ಲಿನ ನಿವಾಸಿಗಳು ಆಗ್ರಹಿಸಿದರು.
ಮೊದ್ದರು ಗ್ರಾಮಕ್ಕೆ ತೆರಳುವ ರಸ್ತೆಗಳಲ್ಲಿ ನಿರ್ಮಿಸಲಾದ ಮೋರಿಗಳು ಸಂಪೂರ್ಣ ಕಳಪೆ ಕಾಮಗಾರಿಯಿಂದ ಕೂಡಿದ್ದು ಮೋರಿಗಳು ಸಂಪೂರ್ಣವಾಗಿ ಹಾಳಗಿದೆ. ಅವುಗಳನ್ನು ಕೂಡಲೇ ದುರಸ್ತಿ ಪಡಿಸುವಂತೆ ಆಗ್ರಹಿಸಿದರು.
ಹಾಲೇರಿ ಗ್ರಾಮದಲ್ಲಿ ಕಳೆದ ಸಾಲಿನಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿಲ್ಲ ಎಂದು ಹಾಲೇರಿ ಗ್ರಾಮದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
2014- 15ನೇ ಸಾಲಿಗೆ ಈ ಭಾಗದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸದಸ್ಯ ಆನಂದ ತಿಳಿಸಿದರು.
ಹಾಲೇರಿ ಗ್ರಾಮದ ಈ ಹಿಂದಿನ ಸಾಲಿನಲ್ಲಿ ನಡೆಸಲಾದ ಕಾಮಗಾರಿಗಳು ಕಳಪೆ ಗುಣ ಮಟ್ಟದಿಂದ ಕೂಡಿದ್ದು, ಕಾಮಗಾರಿ ನಿರ್ವಹಿಸಿದ್ದ ಗುತ್ತಿಗೆದಾರ ಮತ್ತು ಎಂಜಿನಿಯರ್ ಅವರನ್ನು ನೇರ ಹೊಣೆಗಾರರನ್ನಾಗಿ ಮಾಡುವಂತೆ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಸಾಲಿನ ಗ್ರಾಮ ಸಭೆಯಲ್ಲಿ ಪ್ರಸ್ತಾಪಿಸಿ ಕೈಗೊಂಡ ಕಾಮರಿಗಳು ಯಾವುದೂ ಆರಂಭವಾಗಿಲ್ಲ ಎಂದು ಗ್ರಾಮಸ್ಥರು ಆಸಾಮಾಧಾನ ವ್ಯಕ್ತಪಡಿಸಿದರು.
ವಿದ್ಯತ್ ತಂತಿ ಪ್ರಾಣಕ್ಕೆ ಕಂಟಕ: ಮೋದೂರು ಗ್ರಾಮದಲ್ಲಿ ವಿದ್ಯುತ್ ತಂತಿಗಳು ತುಂಡಾಗಿ ಮತ್ತು ಕೆಲವು ಕಡೆಗಳಲ್ಲಿ ತಂತಿಗಳು ಕೆಳಭಾಗಕ್ಕೆ ಬಾಗಿದೆ. ಇದರಿಂದ ಯಾವುದೇ ಹಾನಿಯಾಗುವುದಕ್ಕಿಂತ ಮುಂಚಿತವಾಗಿ ವಿದ್ಯುತ್ ತಂತಿಗಳನ್ನು ದುರಸ್ತಿ ಪಡಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು.
ಹಾಲೇರಿ, ಮೊದೂರು ಗ್ರಾಮಗಳಲ್ಲಿ ನಿತ್ಯ ಕಾಡಾನೆಗಳ ಪುಂಡಾಟಿಕೆ ಹೆಚ್ಚಾಗಿದೆ. ಆದರೆ, ಸಮಸ್ಯೆಯನ್ನು ಹೊತ್ತು ತಂದ ಗ್ರಾಮಸ್ಥರಿಗೆ ಅಧಿಕಾರಿಗಳು ಆಗಮಿಸದೆ ಇದ್ದುದರಿಂದ ಗ್ರಾಮಸ್ಥರು ಪಂಚಾಯಿತಿ ಮೂಲಕ ಪತ್ರ ವ್ಯವಹಾರ ನಡೆಸುವಂತೆ ತಿಳಿಸುವ ಮೂಲಕ ಕಾಡಾನೆಗಳು ತೋಟಗಳಲ್ಲಿಯೇ ಬಿಡುಬಿಟ್ಟಿದ್ದು ಇದರಿಂದ ತೋಟಗಳಲ್ಲಿ ಬೆಳೆಸಲಾದ ಕೃಷಿ ಫಸಲುಗಳನ್ನು ತಿಂದು ನಾಶಗೊಳಿಸುತ್ತಿದೆ.
ಕಾಡಾನೆಗಳು ಹಾಡ ಹಗಲಿನಲ್ಲಿ ರಸ್ತೆಯಲ್ಲಿಯೇ ತಿರುಗಾಡುತ್ತಿದ್ದು, ಇದರಿಂದ ಶಾಲೆ ಮಕ್ಕಳು, ಸಾರ್ವಜನಿಕರು, ಕೂಲಿ ಕಾರ್ಮಿಕರು ತೋಟಗಳಲ್ಲಿ ಜೀವ ಭಯದಲ್ಲಿ ಕೆಲಸ ನಿರ್ವಹಿಸುವಂತಾಗಿದೆ. ಇತ್ತೀಚೆಗೆ ಹೊರೂರು ಗ್ರಾಮದಲ್ಲಿ ಕಾಡಾನೆಯೊಂದು ಹಗಲಿನಲ್ಲಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಇಬ್ಬರು ಕಾರ್ಮಿಕರ ಮೇಲೆ ದಾಳಿ ನಡೆಸಿದೆ. ಕೂಡಲೇ ಕಾಡಾನೆಗಳನ್ನು ಕಾಡಿಗೆ ಅಟ್ಟಲು ಅರಣ್ಯಾಧಿಕಾರಿಗಳ ಗಮನಕ್ಕೆ ತರುವಂತೆ ಗ್ರಾಮಸ್ಥರು ಆಗ್ರಹಿಸಿದರು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಸದಸ್ಯೆ ಸರೋಜ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹರೀಶ್, ಸದಸ್ಯರಾದ ನೋಡಲ್ ಅಧಿಕಾರಿ, ವಿವಿಧ ಇಲಾಖಾಧಿಕಾರಿ, ಸಂಘ ಸಂಸ್ಥೆ ಪದಾಧಿಕಾರಿಗಳು ಇದ್ದರು.
Advertisement