ಮಡಿಕೇರಿ: 2014-15ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಖಾಸಗಿಯಾಗಿ ನೋಂದಣಿ ಮಾಡಿಕೊಳ್ಳುವ ವಿದ್ಯಾರ್ಥಿಗಳು ರಾಜ್ಯದ ಅಂಗೀಕೃತ ಪ್ರೌಢಶಾಲೆ, ಸಂಯುಕ್ತ ಪದವಿ ಪೂರ್ವ ಕಾಲೇಜು ಮುಖ್ಯಸ್ಥರ ಮುಖಾಂತರ ನಿಗದಿಪಡಿಸಿದ ನಮೂನೆಯಲ್ಲಿ ಹಾಗೂ ನೋಂದಣಿ ಶುಲ್ಕ 185ಗಳ ಉಐಖಊಈಖಿಕಖ, ಓಖಊಊಇ ಇಆಃಎಆಔಕಖಊ ಇವರ ಹೆಸರಿಗೆ ಪಾವತಿಯಾಗುವಂತೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ನೆಫ್ಟ್ ಚಲನ್ ಮುಖೇನ ಪಡೆದು, ಜಿಲ್ಲಾ ಉಪನಿರ್ದೇಶಕರು ಸಾ.ಶಿ.ಇ ಇವರಿಗೆ ಸಲ್ಲಿಸಿ, ನೋಂದಣಿ ಮಾಡಿಕೊಳ್ಳಲು ಆಗಸ್ಟ್ 8 ಕೊನೆ ದಿನವಾಗಿದೆ. ಹಾಗೂ ಪರೀಕ್ಷಾ ಶುಲ್ಕವನ್ನು ಮುಖ್ಯ ಶಿಕ್ಷಕರ ಕಚೇರಿಯಲ್ಲಿ ಪಾವತಿಸಲು ಆಗಸ್ಟ್ 18 ಕೊನೆ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಹತ್ತಿರದ ಪ್ರೌಢಶಾಲಾ ಮುಖ್ಯ ಶಿಕ್ಷಕರನ್ನು ಸಂಪರ್ಕಿಸಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಸವರಾಜು ಅವರು ತಿಳಿಸಿದ್ದಾರೆ.
ಕೂಡಿಗೆ: ವನಮಹೋತ್ಸವ, ಕಾನೂನು ಶಿಬಿರ ನಾಳೆ
ಮಡಿಕೇರಿ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಡಿಕೇರಿ ತಾಲೂಕು ಕಾನೂನು ಸೇವಾ ಸಮಿತಿ, ಸೋಮವಾರಪೇಟೆ ವಕೀಲರ ಸಂಘ, ಕುಶಾಲನಗರ ಅರಣ್ಯ ಇಲಾಖೆ ಮತ್ತು ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಆಗಸ್ಟ್ 8ರಂದು ಸಂಜೆ 4 ಗಂಟೆಗೆ ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವನಮಹೋತ್ಸವ ಹಾಗೂ ಕಾನೂನು ಶಿಬಿರ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿ.ಜೆ.ಎಂ. ಟಿ.ಸಿ ಶ್ರೀಕಾಂತ್, ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಡಿ.ಜಿ. ಗುರುಶಾಂತಪ್ಪ, ಸೋಮವಾರಪೇಟೆ ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಜೆ.ಎಂ.ಎಫ್.ಸಿ. ಅಬ್ದುಲ್ ಖಾದರ್, ಕುಶಾಲನಗರ ವಕೀಲರ ಸಂಘದ ಅಧ್ಯಕ್ಷ ಆರ್.ಕೆ. ನಾಗೇಂದ್ರ ಬಾಬು, ವಕೀಲ ಕೆ.ಬಿ. ಮೋಹನ ಮತ್ತಿತರರು ಭಾಗವಹಿಸಲಿದ್ದಾರೆ.
Advertisement