ಗೋಣಿಕೊಪ್ಪಲು: ಇಲ್ಲಿಗೆ ಸಮೀಪ ತೂಚಮಕೇರಿಯ ಮಾಚಿಮಾಡ ನರೇಂದ್ರ ಎಂಬವರ ಕಾಫಿ ತೋಟದಲ್ಲಿ ಗೊಬ್ಬರ ಚೀಲದಲ್ಲಿ ಬಚ್ಚಿಡಲಾಗಿದ್ದ ಸುಮಾರು ರು. 4 ಲಕ್ಷ ಮೌಲ್ಯದ ಗಂಧದ ತುಂಡುಗಳನ್ನು ಬುಧವಾರ ಪೊನ್ನಂಪೇಟೆ ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ.
ಅರಣ್ಯ ಇಲಾಖೆಗೆ ದೊರೆತ ಖಚಿತ ಮಾಹಿತಿ ಮೇರೆ ಪೊನ್ನಂಪೇಟೆ ವಲಯಾರಣ್ಯಾಧಿಕಾರಿ ಕೃಷ್ಣಯ್ಯ ಹಾಗೂ ಸಿಬ್ಬಂದಿತೂಚಮಕೇರಿ ಕಾಫಿ ತೋಟದಿಂದ ವಶಪಡಿಸಿದ್ದಾರೆ.
ಬೇರೆಡೆ ಗಂಧದ ಮರ ಕಡಿದು ತುಂಡುಗಳನ್ನಾಗಿ ಮಾರ್ಪಡಿಸಿ ತಂದಿರಬಹುದು ಎಂದು ಶಂಕಿಸಲಾಗಿದೆ. ಪ್ರಕರಣ ದಾಖಲಿಸಿರುವ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಹಾಕಿಪಟು ಸುನಿಲ್‌ಗೆ ಸನ್ಮಾನ ಇಂದು
ಸೋಮವಾರಪೇಟೆ: ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಭಾರತ ತಂಡ ಹಾಕಿಯಲ್ಲಿ ಬೆಳ್ಳಿ ಪದಕ ಪಡೆದಿದ್ದಲ್ಲದೆ ತಂಡದಲ್ಲಿ ಪ್ರಮುಖ ಆಟಗಾರನಾಗಿ ಮಿಂಚಿದ್ದ ಸೋಮವಾರಪೇಟೆ ಮೂಲದ ಎಸ್.ವಿ.ಸುನಿಲ್‌ಗೆ ಆ.7ರಂದು ಪಟ್ಟಣದಲ್ಲಿ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ. ಇಲ್ಲಿನ ಡಾಲ್ಫೀನ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನಗರದ ಪತ್ರಿಕಾಭವನದಲ್ಲಿ ಬೆಳಗ್ಗೆ 11 ಗಂಟೆಗೆ ಆಯೋಜಿಸಲಾಗಿರುವ ಸಮಾರಂಭದಲ್ಲಿ ಎಸ್.ವಿ. ಸುನಿಲ್ ಅವರನ್ನು ಸನ್ಮಾನಿಸಲಾಗುವುದು ಎಂದು ಕ್ಲಬ್ ಅಧ್ಯಕ್ಷ ಅಶೋಕ್ ತಿಳಿಸಿದ್ದಾರೆ.
Advertisement