ಮಡಿಕೇರಿ: ಜೀವನದಿ ಕಾವೇರಿಯ ಉಗಮ ಕ್ಷೇತ್ರ ತಲಕಾವೇರಿಯಲ್ಲಿ ಮಳೆಗೆ ಪ್ರಾರ್ಥಿಸಿ ಸೋಮವಾರ ಪರ್ಜನ್ಯ ಜಪ ಯಜ್ಞ ಜರುಗಿತು. ವಿವಿಧೆಡೆಗಳ ಸಂತರು ಹೋಮ ಹವನಾದಿಗಳನ್ನು ನಡೆಸಿ ದೇಶಕ್ಕೆ ಉತ್ತಮ ಮಳೆಯಾಗಲಿ ಎಂದು ಪ್ರಾರ್ಥಿಸಿದರು. ಕಾವೇರಿ ಸಂರಕ್ಷಣೆಯ ನಿಟ್ಟಿನಲ್ಲಿಯೂ ವಿಶೇಷ ಪ್ರಾರ್ಥನೆ ನಡೆಯಿತು.
ವಿಶೇಷ ಪ್ರಾರ್ಥನೆ: ತಲಕಾವೇರಿ ಪ್ರಾಂತ್ಯದಲ್ಲಿ ಧಾರಾಕಾರ ಮಳೆಯಾಗಿ ನಾಡಿಗೆ ಸುಭಿಕ್ಷೆ ತರುವಂತಾಗಬೇಕು. ಜನ-ಜಾನುವಾರು, ಬೆಳೆಗಳಿಗೆ ಅನುಕೂಲವಾಗಲು ಹೆಚ್ಚಿನ ಮಳೆಯಾಗಬೇಕು ಎಂಬ ಪ್ರಾರ್ಥನೆಯನ್ನು ಈ ಸಂದರ್ಭ ಮಾಡಲಾಯಿತು.