ಮೀನುಮರಿ ಬಿತ್ತನೆ ಕ್ರಮ

Updated on: 

ಮಡಿಕೇರಿ: ಮೀನುಗಾರಿಕೆ ಇಲಾಖೆಯಿಂದ ಸರಬರಾಜು ಮಾಡುವ ಪ್ರತೀ ಮೀನುಮರಿ ವೆಚ್ಚ (ಹುಲ್ಲುಗೆಂಡೆ ಮೀನುಮರಿಗಳನ್ನು ಹೊರತುಪಡಿಸಿ.) ಸಾಗಣೆ ಹಾಗೂ ಪ್ಯಾಕಿಂಗ್ ದರಗಳ್ನೊಳಗೊಂಡು 30 ಪೈಸೆಯಿಂದ 31 ಪೈಸೆ ಇರುತ್ತದೆ. ಈ ಮರಿಗಳನ್ನು ಇಲಾಖೆ ಉತ್ಪಾದನಾ ಕೇಂದ್ರಗಳಲ್ಲಿ 30 ರಿಂದ 45 ದಿನಗಳವರೆಗೆ ಸಾಕಣೆ ಮಾಡಿ ಸರಬರಾಜು ಮಾಡಲಾಗುತ್ತದೆ.
ಹೀಗೆ ಸರಬರಾಜು ಮಾಡಿದ ಒಂದು ಮೀನುಮರಿಗೆ ಬದುಕಲು ಕನಿಷ್ಟ 10 ಚದರ ಅಡಿಗಳ ಜಲವಿಸ್ತೀರ್ಣದ ಅವಶ್ಯಕತೆಯಿದೆ. ಉದಾಹರಣೆಗೆ 10 ಅಡಿ ಉದ್ದ ಹಾಗು 10 ಅಡಿ ಅಗಲದ ಒಂದು ಕೊಳದಲ್ಲಿ ಕೇವಲ 10 ಮೀನುಮರಿಗಳು ಬದುಕಿ ಉಳಿಯಬಹುದಾಗಿದೆ. ಈ ಸಾಂದ್ರತೆಗಿಂತ ಹೆಚ್ಚು ಮೀನುಮರಿಗಳನ್ನು ಬಿತ್ತನೆ ಮಾಡಿದಲ್ಲಿ ಅವುಗಳು ಆಮ್ಲಜನಕ ಹಾಗು ಸ್ಥಳದ ಕೊರತೆಯಿಂದಾಗಿ ಮರಣ ಹೊಂದುತ್ತವೆ. ಹಾವು ಅಥವಾ ನೀರುಕಾಗೆಗಳಂತಹ ವೈರಿಗಳನ್ನು ಹತೋಟಿಯಲ್ಲಡಬೇಕೇ ಹೊರತು ಅವುಗಳು ತಿಂದು ಉಳಿದ ಮೀನುಮರಿಗಳು ಬದುಕಲಿ ಎಂಬ ವಾದ ತಪ್ಪಾಗುತ್ತದೆ. ನೀರುಕಾಗೆಗಳು ಕೆರೆಗಳಲ್ಲಿರುವ ಎಲ್ಲಾ ಸಣ್ಣ ಮೀನುಮರಿಗಳನ್ನು ತಿಂದು ಮುಗಿಸುವ ಸಾಮರ್ಥ್ಯ ಹೊಂದಿರುತ್ತವೆ.
ಇಲಾಖೆ ಉತ್ಪಾದನಾ ಕೇಂದ್ರಗಳಲ್ಲಿ ಮೀನುಮರಿಗಳನ್ನು ಆಮ್ಲಜನಕ ತುಂಬಿದ ಪ್ಲಾಸ್ಟಿಕ್ ಪ್ಯಾಕ್‌ಗಳಲ್ಲಿ ನೀಡಲಾಗಿತ್ತದೆ. ಅಲ್ಲದೆ ಮೀನುಮರಿಗಳ ಸರಬರಾಜಿನ ಹಿಂದಿನ ದಿನದಂದು ಅವುಗಳಿಗೆ ಆಹಾರವನ್ನು ನೀಡುವುದಿಲ್ಲ.
ಕಾರಣ ಸಾಗಣೆ ಸಮಯದಲ್ಲಿ ಅವುಗಳ ಹಿಕ್ಕೆಯಿಂದಾಗಿ ಪ್ಯಾಕೆಟ್‌ಗಳಲ್ಲಿ ಆಮ್ಲಜನಕದ ಕೊರತೆ ಆಗದಂತೆ ತಡೆಹಿಡಿಯಲು. ಇದರಿಂದಾಗಿ 30 ರಿಂದ 40 ದಿನದ ಮರಿಗಳು ದಣಿವಾಗಿರುತ್ತದೆ. ಈ ಮರಿಗಳನ್ನು ಹೇರಳವಾಗಿ ನೈಸರ್ಗಿಕ ಆಹಾರವಿರುವ ಕೆರೆಗಳಿಗೆ ಬಿತ್ತನೆ ಮಾಡಬೇಕೆ ಹೊರತು ಯಾವುದೇ ಕಾರಣಕ್ಕೆ ಸಣ್ಣ ಬಕೆಟಟ್ಗಳಲ್ಲಿ ಅಥವಾ ಡ್ರಂಗಳಲ್ಲಿ ಇಡತಕ್ಕದಲ್ಲ.
ಹೀಗೆ ಮಾಡಿದ್ದಲ್ಲಿ ಆಮ್ಲಜನಕ, ಆಹಾರ ಹಾಗೂ ಸ್ಥಳದ ಕೊರತೆಯಿಂದಾಗಿ ಈ ಮರಿಗಳು ಮರಣ ಹೊಂದುವುದು ಖಂಡಿತವಾಗುತ್ತದೆ. ಮೀನುಮರಿಗಳನ್ನು ಪಡೆದ ದಿನದಂದೇ ಕೆರೆಗಳಿಗೆ ಬಿತ್ತನೆ ಮಾಡಲು ಅಸಾಧ್ಯವಾದ ಅನಿವಾರ್ಯ ಸಂದರ್ಭಗಳಲ್ಲಿ ಕೆಲವು ಗಂಟೆಗಳವರೆಗೆ ಇಲಾಖೆಯಿಂದ ಸರಬರಾಜು ಮಾಡಿದ ಆಮ್ಲಜನಕ ತುಂಬಿದ ಪ್ಯಾಕೆಟ್‌ಗಳನ್ನು ಒಡೆಯದೇ ಹಾಗೆಯೇ ಉಳಿಸುವುದು ಪ್ರಯೋಜನಕಾರಿ.
ಕೃಷಿಕರು ಮೀನುಮರಿಗಳ ಮರಣ ತಡೆಗಟ್ಟಲು ಮೇಲ್ಕಂಡ ನಿಯಮಗಳನ್ನು ಪಾಲಿಸಬೇಕಾಗಿ ಕೋರಿದೆ. ಮೀನು ಕೃಷಿ ಬಗ್ಗೆ ಭಿತ್ತಿ ಪತ್ರಗಳು ಇಲಾಖೆಯಲ್ಲಿ ಲಭ್ಯವಿದ್ದು ಕೃಷಿಕರಿಗೆ ಉಚಿತವಾಗಿ ನೀಡಲಾಗುತ್ತಿದೆ. ಹೆಚ್ಚಿನ ವಿವರಗಳಿಗೆ ಮೀನುಗಾರಿಕೆ ಸಹಾಯಕ ನಿರ್ದೇಶಕರು- 2 ಮಡಿಕೇರಿ ಅವರನ್ನು ಸಂಪರ್ಕಿಸಬಹುದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com