ಮಡಿಕೇರಿ: ಜಿಲ್ಲೆಯಲ್ಲಿ ಬುಧವಾರ ಉತ್ತಮ ಮಳೆಯಾಗಿದೆ, ದಿನದ ಸರಾಸರಿ ಮಳೆ 3.97 ಮಿ.ಮೀ. ಕಳೆದ ವರ್ಷ ಇದೇ ದಿನ 19.86 ಮಿ.ಮೀ. ಮಳೆಯಾಗಿತ್ತು. ಮಡಿಕೇರಿ ತಾಲೂಕಿನಲ್ಲಿ ಬುಧವಾರದ ಸರಾಸರಿ ಮಳೆ 9 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 1.38 ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ಮಳೆ 1.54 ಮಿ.ಮೀ. ಮಳೆಯಾಗಿದೆ.
ಹೋಬಳಿವಾರು ವಿವರ (ಮಿ.ಮೀ.): ಮಡಿಕೇರಿ ಕಸಬಾ- 8.8, ನಾಪೋಕ್ಲು 3.6, ಸಂಪಾಜೆ 11, ಭಾಗಮಂಡಲ 12.6, ವಿರಾಜಪೇಟೆ ಕಸಬಾ 2.4, ಹುದಿಕೇರಿ 2.3, ಶ್ರೀಮಂಗಲ 1, ಪೊನ್ನಂಪೇಟೆ 2.6, ಸೋಮವಾರಪೇಟೆ ಕಸಬಾ 1, ಶಾಂತಳ್ಳಿ 4.02, ಕುಶಾಲನಗರ 2.2, ಸುಂಟಿಕೊಪ್ಪ 2 ಮಿ.ಮೀ. ಮಳೆಯಾಗಿದೆ.
ಹಾರಂಗಿ ಮಟ್ಟ: ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಬುಧವಾರದ ನೀರಿನ ಮಟ್ಟ 2827.35 ಅಡಿಗಳು, ಕಳೆದ ವರ್ಷ ಇದೇ ದಿನ 2856.06 ಅಡಿ. ಒಳ ಹರಿವು 363 ಕ್ಯೂಸೆಕ್.