ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸೋಮವಾರ ಉತ್ತಮ ಮಳೆಯಾಗಿದ್ದು, ಜಿಲ್ಲೆಯ ನದಿಗಳು ಉಕ್ಕಿ ಹರಿಯುತ್ತಿವೆ.
ಜಿಲ್ಲೆಯಾದ್ಯಂತ ಸೋಮವಾರ ಸರಾಸರಿ ಮಳೆ 4 ಸೆಂ.ಮೀ. ಮಳೆ ದಾಖಲಾಗಿದೆ. ಜನವರಿಯಿಂದ ಇಲ್ಲಿಯವರೆಗೆ 123 ಸೆಂ.ಮೀ., ಕಳೆದ ವರ್ಷ ಇದೇ ಅವಧಿಯಲ್ಲಿ 184 ಸೆಂ.ಮೀ. ಮಳೆಯಾಗಿತ್ತು.
ಮಡಿಕೇರಿ ತಾಲೂಕಿನಲ್ಲಿ ಸೋಮವಾರ ಸರಾಸರಿ 5 ಸೆಂ.ಮೀ., ಜನವರಿಯಿಂದ ಇಲ್ಲಿಯವರೆಗಿನ 180 ಸೆಂ.ಮೀ., ಕಳೆದ ವರ್ಷ ಇದೇ ಅವಧಿಯಲ್ಲಿ 268 ಸೆಂ.ಮೀ. ಮಳೆಯಾಗಿತ್ತು. ವಿರಾಜಪೇಟೆ ತಾಲೂಕಿನಲ್ಲಿ ಸೋಮವಾರ ಸರಾಸರಿ 3 ಸೆಂ.ಮೀ., ಜನವರಿಯಿಂದ ಇಲ್ಲಿಯವರೆಗೆ 109 ಸೆಂ.ಮೀ., ಕಳೆದ ವರ್ಷ ಇದೇ ಅವಧಿಯಲ್ಲಿ 133 ಸೆಂ.ಮೀ. ಮಳೆ ದಾಖಲಾಗಿತ್ತು.
ಸೋಮವಾರಪೇಟೆ ತಾಲೂಕಿನಲ್ಲಿ ಸೋಮವಾರ ಸರಾಸರಿ ಮಳೆ 4 ಸೆಂ.ಮೀ., ಜನವರಿಯಿಂದ ಇಲ್ಲಿಯವರೆಗೆ 79 ಸೆಂ.ಮೀ., ಕಳೆದ ವರ್ಷ ಇದೇ ಅವಧಿಯಲ್ಲಿ 151 ಸೆಂ.ಮೀ. ಮಳೆ ದಾಖಲಾಗಿತ್ತು.
ಹೋಬಳಿವಾರು ಮಳೆ: ಮಡಿಕೇರಿ ಕಸಬಾ 5, ನಾಪೋಕ್ಲು 2, ಸಂಪಾಜೆ 4, ಭಾಗಮಂಡಲ 7, ವಿರಾಜಪೇಟೆ ಕಸಬಾ 2, ಹುದಿಕೇರಿ 3, ಶ್ರೀಮಂಗಲ 9, ಪೊನ್ನಂಪೇಟೆ 2, ಅಮ್ಮತ್ತಿ 2, ಬಾಳೆಲೆ 1, ಸೋಮವಾರಪೇಟೆ ಕಸಬಾ 5, ಶನಿವಾರಸಂತೆ 2, ಶಾಂತಳ್ಳಿ 13, ಕೊಡ್ಲಿಪೇಟೆ 2, ಸುಂಟಿಕೊಪ್ಪ 1.1 ಸೆಂ.ಮೀ.
ಹಾರಂಗಿ ಜಲಾಶಯ ಮಟ್ಟ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು. ಸೋಮವಾರ ನೀರಿನ ಮಟ್ಟ 2855.62 ಅಡಿಗಳು. ಕಳೆದ ವರ್ಷ ಇದೇ ದಿನ 2857.15 ಅಡಿ. ಹಾರಂಗಿಯಲ್ಲಿ ಸೋಮವಾರ ನೀರಿನ ಒಳ ಹರಿವು 7344 ಕ್ಯುಸೆಕ್. ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 20425 ಕ್ಯುಸೆಕ್. ನೀರಿನ ಹೊರ ಹರಿವು ನದಿಗೆ 5500 ಕ್ಯುಸೆಕ್, ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 17231ಕ್ಯುಸೆಕ್.