ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆ ಕ್ಷೀಣಗೊಂಡಿದೆ. ಜಿಲ್ಲೆಯಲ್ಲಿ ಸರಾಸರಿ ಮಳೆ 2 ಸೆಂ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 149 ಸೆಂ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 215 ಸೆಂ.ಮೀ ಮಳೆ ದಾಖಲಾಗಿತ್ತು.
ಮಡಿಕೇರಿ ತಾಲೂಕಿನಲ್ಲಿ ಭಾನುವಾರದ ಸರಾಸರಿ ಮಳೆ 4 ಸೆಂ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 215 ಸೆಂ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 306 ಸೆಂ.ಮೀ. ಮಳೆಯಾಗಿತ್ತು.
ವಿರಾಜಪೇಟೆ ತಾಲೂಕಿನಲ್ಲಿ ಭಾನುವಾರದ ಸರಾಸರಿ ಮಳೆ 5 ಸೆಂ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 125 ಸೆಂ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 156 ಸೆಂ.ಮೀ. ಮಳೆಯಾಗಿತ್ತು.
ಸೋಮವಾರಪೇಟೆ ತಾಲೂಕಿನಲ್ಲಿ ಭಾನುವಾರದ ಸರಾಸರಿ ಮಳೆ 2 ಸೆಂ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 107 ಸೆಂ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 184 ಸೆಂ.ಮೀ. ಮಳೆಯಾಗಿತ್ತು.
ಹೋಬಳಿವಾರು ಮಳೆ ವಿವರ: ಮಡಿಕೇರಿ ಕಸಬಾ 7, ಸಂಪಾಜೆ 7, ಭಾಗಮಂಡಲ 3, ಸೋಮವಾರಪೇಟೆ ಕಸಬಾ 2, ಶನಿವಾರಸಂತೆ 2, ಶಾಂತಳ್ಳಿ 5, ಕೊಡ್ಲಿಪೇಟೆ 2, ಸುಂಟಿಕೊಪ್ಪ 2 ಸೆಂ.ಮೀ. ಮಳೆಯಾಗಿದೆ.
ಹಾರಂಗಿ ಜಲಾಶಯದ ನೀರಿನ ಮಟ್ಟ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಭಾನುವಾರದ ನೀರಿನ ಮಟ್ಟ 2856.02 ಅಡಿಗಳು, ಕಳೆದ ವರ್ಷ ಇದೇ ದಿನ 2855.20 ಅಡಿ. ಹಾರಂಗಿಯಲ್ಲಿ ನೀರಿನ ಒಳ ಹರಿವು 8841 ಕ್ಯುಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 10,032 ಕ್ಯುಸೆಕ್. ನೀರಿನ ಹೊರ ಹರಿವು ನದಿಗೆ 5852, ನಾಲೆಗೆ 400 ಕ್ಯುಸೆಕ್, ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 9200, ನಾಲೆಗೆ 700 ಕ್ಯುಸೆಕ್.