ಮಡಿಕೇರಿ: ಭಾನುವಾರ ಮುಂಜಾನೆ ಸುಮಾರು 4.30ಕ್ಕೆ ಚೆಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯ ಕೆ. ಚೆಟ್ಟಳ್ಳಿ ಗ್ರಾಮದ ಮಲ್ಕೋಡು ಸಂತಾರು ಮೇದಪ್ಪ ಎಂಬರವ ಮನೆ ಮೇಲೇ ಕಾಡಾನೆ ದಾಳಿ ಮಾಡಿದೆ.
ಮನೆ ಮೇಲೆ ದಾಳಿ ನಡೆಸಿದ ಬಳಿಕ ಘೀಳಿಡುತ್ತಾ ಅರ್ಧ ಗಂಟೆ ಕಾಲ ರಸ್ತೆ ಬದಿಯಲ್ಲಿ ನಿಂತಿದ್ದ ಕಾಡಾನೆ ಸ್ಥಳದಿಂದ ತೆರಳಿದ ಬಳಿಕವಷ್ಟೇ ಮನೆ ಮಾಲೀಕರು ಮನೆಯಿಂದ ಹೊರಬಂದಿದ್ದಾರೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಕಾಡಾನೆ ದಾಳಿಯಿಂದಾಗಿ ಮನೆಯ ಹೆಂಚುಗಳಿಗೆ ಹಾನಿಯಾಗಿದೆ.
ಕೆಲವು ದಿನಗಳಿಂದ ಮಲ್ಕೋಡು ಚೆಟ್ಟಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು ಸಂಬಂಧ ಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳ ಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.