ಸರಾಸರಿ 3.92 ಮಿಮೀ ಮಳೆ

Updated on: 

ಮಡಿಕೇರಿ: ಜಿಲ್ಲೆಯಲ್ಲಿ ಬುಧವಾರ ಸರಾಸರಿ 3.92 ಮಿ.ಮೀ. ಮಳೆಯಾಗಿದೆ. ಜಿಲ್ಲೆಯಲ್ಲಿ ಕಳೆದ ವರ್ಷ ಇದೇ ದಿನ 91.97 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಈವರೆಗೆ  548.44 ಮಿ.ಮೀ ಮಳೆಯಾಗಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 816.59 ಮಿ.ಮೀ. ಮಳೆ ದಾಖಲಾಗಿತ್ತು. ಮಡಿಕೇರಿ ತಾಲೂಕಿನಲ್ಲಿ ಬುಧವಾರ ಸರಾಸರಿ ಮಳೆ 10. ಬುಧವಾರ ಸರಾಸರಿ ಮಳೆ 0.17 ಮಿ.ಮೀ.,  ಸೋಮವಾರಪೇಟೆ ತಾಲೂಕಿನಲ್ಲಿ  1.08 ಮಿ.ಮೀ.ಮಳೆಯಾಗಿದೆ.


ಕರಿಮೆಣಸು ಅಕ್ರಮ  ಸಾಗಾಟ: ಎಪಿಎಂಸಿ ದಂಡ ವಸೂಲಿ
ಗೋಣಿಕೊಪ್ಪಲು: ಗೋಣಿಕೊಪ್ಪಲಿನ ಕೃಷಿ ಉತ್ಪನ ಮಾರುಕಟ್ಟೆಗೆ ಸಮಿತಿಗೆ ಸೆಸ್ ಪಾವತಿಸದೆ ಅನಧಿಕೃತವಾಗಿ ಕರಿಮೆಣಸು ಸಾಗಿಸುತ್ತಿದ್ದ ಮಾನಂದವಾಡಿಯ ರಫೀಕ್‌ನನ್ನು ಎಪಿಎಂಸಿ ಪ್ರಮುಖರು ವಶಕ್ಕೆ ಪಡಿದಿದ್ದು ದಂಡ ವಸೂಲಿ ಮಾಡಿದ ಪ್ರಕರಣ ಬುಧವಾರ ಮಧ್ಯಾಹ್ನ ನಡೆದಿದೆ.  ವಿರಾಜಪೇಟೆಯಿಂದ ಮೈಸೂರಿಗೆ ಲಾರಿಯಲ್ಲಿ ರು. 8.75 ಲಕ್ಷ ಮೌಲ್ಯದ ಕರಿಮೆಣಸು ಸಾಗಿಸುತ್ತಿರುವ ಖಚಿತ ಸುಳಿವಿನ ಮೇರೆ ಕಾರ್ಯಾಚರಣೆ ನಡೆಸಿದ ಎಪಿಎಂಸಿ ಅಧ್ಯಕ್ಷ ಅಚ್ಚಪಂಡ ಮಹೇಶ್, ಸದಸ್ಯರು ಹಾಗೂ ಸಿಬ್ಬಂದಿ ಲಾರಿ ಸಹಿತ ಮಾಲು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು.  ಸೆಸ್ ರು. 13,125 ಹಾಗೂ ದಂಡ ರು. 39,375 ಸೇರಿದಂತೆ ಒಟ್ಟು ರು. 52,500ಗಳನ್ನು ರಫೀಕ್‌ನಿಂದ ವಸೂಲಿ ಮಾಡಲಾಗಿದೆ.  ಅಧ್ಯಕ್ಷ ಮಹೇಶ್ ಜೊತೆ ಕಾರ್ಯಾಚರಣೆಯಲ್ಲಿ ವರ್ತಕರ ಕ್ಷೇತ್ರದ ಸದಸ್ಯ ಕಿಲನ್ ಗಣಪತಿ, ಕಾರ್ಯದರ್ಶಿ ಮರಿಗಂಗಯ್ಯ, ಸಿಬ್ಬಂದಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com