ಎಚ್ಬಿಎಚ್ ಶಾಖೆ ಪ್ರಾರಂಭ

Updated on: 




ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರವಾದ ಚಿಕ್ಕಬಳ್ಳಾಪುರದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ನ ನೂತನ ಶಾಖೆಗೆ ಎಸ್ಬಿಎಚ್ ದಕ್ಷಿಣ ವಲಯದ ಮಹಾ ಪ್ರಬಂಧಕ ಬಿ.ಗಣೇಶ್ ಪೈ ಅವರು ಬುಧವಾರ ಚಾಲನೆ ನೀಡಿದರು.
ನೂತನ ಶಾಖೆಗೆ ಚಾಲನೆ ನೀಡಿ ಮಾತನಾಡಿ, ದಕ್ಷಿಣ ಭಾರತದಲ್ಲಿ 200 ಶಾಖೆಗಳಲ್ಲಿ 18 ಸಾವಿರ ಕೋಟಿ ವಹಿವಾಟಿನೊಂದಿಗೆ 12 ಸಾವಿರ ಕೋಟಿ ಠೇವಣಿ ಹೊಂದಿರುವ ಎಸ್ಬಿಎಚ್, ಕರ್ನಾಟಕದಲ್ಲಿ ಈಗಾಗಲೇ 31 ಶಾಖೆ ಹೊಂದಿದೆ. ಅಲ್ಲದೆ, ಮತ್ತಷ್ಟು ಹೊಸ ಶಾಖೆ ಪ್ರಾರಂಭಿಸುವ ಯೋಜನೆ ಹೊಂದಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರೀಯ ಕಾರ್ಯಾಲಯದ ಸಹಾಯಕ ಮಹಾ ಪ್ರಬಂಧಕ ಎಸ್. ಸತ್ಯನಾರಾಯಣ, ಶಾಖಾ ಪ್ರಬಂಧಕ ನರಸಿಂಹಕಟ್ಟಿ, ನರಸಿಂಹರಾವ್ ಕುಲಕರ್ಣಿ ಸೇರಿದಂತೆ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com