'ದಾನದಲ್ಲಿ ರಕ್ತದಾನವೇ ಮಿಗಿಲು'

Updated on: 




ಮುಳಬಾಗಲು: ಎಲ್ಲಾ ದಾನಗಳಿಗಿಂತಲೂ ರಕ್ತದಾನ ಮಿಗಿಲಾದುದು. ಈ ನಿಟ್ಟಿನಲ್ಲಿ ಆಪತ್ತಿನಲ್ಲಿರುವರ ಪಾಲಿಗೆ ರಕ್ತದಾನ ಕೊಡುವುದರಿಂದ ಬದುಕಿಗೆ ಒಂದು ಅರ್ಥ ಸಿಗುತ್ತದೆ ಪಡೆದಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ.ಎಂ.ರಾಮಸ್ವಾಮಿ ಕಿವಿಮಾತು ಹೇಳಿದ್ದಾರೆ.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಎನ್ಎಸ್ಎಸ್, ಮುಳಬಾಗಲು ರೋಟರಿ, ರೆಡ್ ಕಾಸ್, ರೆಡ್ರಿಬ್ಬನ್ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ರಕ್ತ ಸಂಗ್ರಹಿಸುವ ರಕ್ತದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.  ರೋಟರಿ ಅಧ್ಯಕ್ಷ ಡಾ.ಪುರುಷೋತ್ತಂ, ಪ್ರಭಾಕರಗುಪ್ತ, ಡಾ.ಮನು, ಪಿ.ಎಸ್.ರಮೇಶ್, ಎನ್ಎಸ್ಎಸ್ ಅಧಿಕಾರಿ ಕೆ.ಎನ್.ಶ್ರೀನಿವಾಸಯ್ಯ,ಧನಂಜಯ, ಸವಿತಾ ಮತ್ತಿತರರು ಭಾಗವಹಿಸಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com