ಕಳಪೆ ಮರಳು ಬಳಕೆ: ತಾಪಂ ಅಧ್ಯಕ್ಷಕರ ತರಾಟೆ

Updated on: 




ಮಾಲೂರು: ನೂತನವಾಗಿ ನಿರ್ಮಿಸುತ್ತಿರುವ ಇಲ್ಲಿನ ನೂರು ಬೆಡ್ಗಳ ಸರ್ಕಾರಿ ಆಸ್ಪತ್ರೆ ಕಾಮಗಾರಿ ಸ್ಥಳಕ್ಕೆ ದಿಢೀರ್ ಭೇಟಿ ನೀಡಿದ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಪ್ಪ ಅವರು, ಕಾಮಗಾರಿಯಲ್ಲಿ ಕಳಪೆ ಮರಳು ಉಪಯೋಗಿಸುತ್ತಿರುವುದನ್ನು ಖಂಡಿಸಿ ಗುತ್ತಿಗೆದಾರರನ್ನು ತರಾಟೆ ತೆಗೆದುಕೊಂಡ ಘಟನೆ ಬುಧವಾರ ನಡೆದಿದೆ.
ಇಲ್ಲಿನ ಕಾಮಗಾರಿ ಬಗ್ಗೆ ಸಾರ್ವಜನಿಕರಿಂದ ಬಂದ ದೂರಿನ ಅನ್ವಯ ದಿಢೀರ್ ಭೇಟಿ ನೀಡಿದ ಚಂದ್ರಪ್ಪ ಅವರು ಕಟ್ಟಡ ಕಟ್ಟಲು ಗುಣಮಟ್ಟದ ಮರಳಿನ ಬದಲಾಗಿ ಮಣ್ಣುಮಿಶ್ರಿತ ಮರಳು ಉಪಯೋಗಿಸುತ್ತಿರುವುದನ್ನು ಕಂಡು ಸ್ಥಳದಲ್ಲಿ ಎಂಜಿನಿಯರ್ ಹಾಗೂ ಗುತ್ತಿಗೆದಾರರ ಅನುಪಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದ ಮೇಸ್ತ್ರಿಯನ್ನು ತರಾಟೆ ತೆಗೆದುಕೊಂಡ ತಾಪಂ ಅಧ್ಯಕ್ಷರು ಕೆಲಸ ಸ್ಥಗಿತಗೊಳಿಸುವಂತೆ ತಿಳಿಸಿದರಲ್ಲದೆ ಇಲಾಖೆ ಅಭಿಯಂತರ ಗಣೇಶರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕಳಪೆ ಕಾಮಗಾರಿ ಬಗ್ಗೆ ವರದಿ ನೀಡುವಂತೆ ತಿಳಿಸಿದರು.
ತಾಪಂ ಸದಸ್ಯರಾದ ಪುಟ್ಟಸ್ವಾಮಿ, ಕೃಷ್ಣಪ್ಪ, ಮೂರ್ತಿ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com