ಚಿಂತಾಮಣಿ: ಇಬ್ಬರು ಬಾಲಕಿಯರನ್ನು ವಂಚಿಸಿ, ಮೋಸಗೊಳಿಸಲು ಯತ್ನಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತಾಲೂಕಿನ ಟಿ.ಗೊಲ್ಲಹಳ್ಳಿ ಗ್ರಾಮದ ಇಬ್ಬರು ಬಾಲಕಿಯರನ್ನು ಇಬ್ಬರು ದುಷ್ಕರ್ಮಿಗಳು ಆಮಿಷ ತೋರಿ ಹುಬ್ಬಳ್ಳಿ ಮಹಾನಗರದಲ್ಲಿ ಗೃಹ ಬಂಧನದಲ್ಲಿಟ್ಟು ಮೋಸಗೊಳಿಸಲು ಯತ್ನಿಸಿದಾಗ, ಈ ಇಬ್ಬರು ಹೆಣ್ಣು ಮಕ್ಕಳು ಸಮಯ ಪ್ರಜ್ಞೆಯಿಂದ ತಪ್ಪಿಸಿಕೊಂಡು ಕೆಂಚಾರ್ಲಹಳ್ಳಿ ಪೊಲೀಸರ ಮುಂದೆ ನಡೆದ ಘಟನೆ ಬಗ್ಗೆ ವಿವರಿಸಿದ್ದಾರೆ ಎನ್ನಲಾಗಿದೆ.