ಕೋಲಾರ: ತಾಲೂಕಿನ ಮುದುವತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡಿಗೇರೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸಿಮೆಂಟ್ ರಸ್ತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್. ವರ್ತೂರ್ ಪ್ರಕಾಶ್ ಉದ್ಘಾಟಿಸಿದರು.
ಗ್ರಾಮದಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದೆ. ಗ್ರಾಮದ ಮುಖ್ಯ ದ್ವಾರದಿಂದ ನಡೆಸಿರುವ ಈ ಸಿಮೆಂಟ್ ರಸ್ತೆ ಕಾಮಗಾರಿಯನ್ನು ಚೌಡೇಶ್ವರಮ್ಮ ದೇವಾಲಯದವರೆಗೆ ವಿಸ್ತರಿಸಲಾಗುವುದು ಮತ್ತು ಗ್ರಾಮಕ್ಕೆ ಅವಶ್ಯವಿರುವ ವಿದ್ಯುತ್ಟ್ರಾನ್ಸ್ಫಾರ್ಮರ್ಅನ್ನು ಶೀಘ್ರವೇ ಅಳವಡಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಪ್ರಕಟಿಸಿದರು.
ಇದೇ ಫೆ.12 ರಿಂದ ನಡೆಯಲಿರುವ ದೇವತಾ ಮಹೋತ್ಸವ ಕಾರ್ಯಕ್ರಮವನ್ನು ಗ್ರಾಮಸ್ಥರು ಯಶಸ್ವಿಗೊಳಿಸಬೇಕು ಎಂದು ಸಲಹೆ ನೀಡಿದ ಸಚಿವರು, ಗ್ರಾಮದ ಚರಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಇಂದಿನಿಂದಲೇ ಚಾಲನೆ ನೀಡಬೇಕು ಎಂದು ಗ್ರಾ.ಪಂ ಕಾರ್ಯದರ್ಶಿಗೆ ತಿಳಿಸಿದರು.
ಶ್ರೀಚೌಡೇಶ್ವರಮ್ಮ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಸಚಿವರು 50 ಸಾವಿರ ರು. ಗಳನ್ನು ಸಚಿವರು ನೀಡಿದರು. ಈ ಸಂದರ್ಭದಲ್ಲಿ ದರಖಾಸ್ತು ಸಮಿತಿ ಅಧ್ಯಕ್ಷ ಬೆಗ್ಲಿ ಪ್ರಕಾಶ್, ತಾಪಂ ಉಪಾಧ್ಯಕ್ಷೆ ಸರಸ್ವತಿ ಮುನಿಕೃಷ್ಣ, ವಕ್ಕಲೇರಿ ಚಲಪತಿ, ಬೆಟ್ಟಬೆಣಜೇನಹಳ್ಳಿ ಇನಾಯತ್, ಗ್ರಾಪಂ ಸದಸ್ಯರಾದ ಲಕ್ಷ್ಮೀ ನಾರಾಯಣ್, ಹರ್ಷವರ್ಧನ್, ಕೋರಗಂಡಹಳ್ಳಿ ಕೃಷ್ಣಪ್ಪ, ಕೆ.ಎಸ್. ಕುಮಾರ್, ನಾಗೇಶ್, ಚಿನ್ನಪ್ಪ, ಆಂಜಿನಪ್ಪ, ದ್ಯಾವೀರಪ್ಪ, ಕರಿಯಪ್ಪ, ವೆಂಕಟರಾಮಪ್ಪ ಮತ್ತಿತರರು ಇದ್ದರು.