ಮಾಲೂರು: ಇಲ್ಲಿನ ಬಸ್ ನಿಲ್ದಾಣದ ಬಳಿ ಉದ್ಯಾನವನದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ರವರ ನೂತನ ಪ್ರತಿಮೆ ಫೆ.14ರಂದು ಉದ್ಘಾಟನೆಗೊಳ್ಳಲಿದೆ.
ಈ ಬಗ್ಗೆ ಪುರಸಭೆ ಅಧ್ಯಕ್ಷೆ ಅಮುದಾ ವೇಣುರವರ ಅಧ್ಯಕ್ಷತೆಯಲ್ಲಿ ತಾಲೂಕಿನ ದಲಿತ ಸಂಘಟನೆಗಳ ಮುಖಂಡರ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅಂದೇ ಬೆಂಗಳೂರು ರಸ್ತೆಯ ಪಂಪ್ ಹೌಸ್ನಿಂದ ರೇಲ್ವೆ ಸೇತುವೆ ತನಕ ಇರುವ ಡಬ್ಬಲ್ ರಸ್ತೆಗೆ ಡಾ. ಅಂಬೇಡ್ಕರ್ ರಸ್ತೆ ಎಂದು ಹೆಸರಿಡಲು ಪುರಸಭೆ ಸದಸ್ಯರ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವುದಾಗಿ ಅಧ್ಯಕ್ಷೆ ಅಮುದಾ ವೇಣು ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮು.ತಿಮ್ಮಯ್ಯ,ಪ್ರತಿಮೆ ಉದ್ಘಾಟನೆ ಬೌದ್ಧ ಭಿಕ್ಕುಗಳ ಮಾರ್ಗದರ್ಶನದಂತೆ ನಡೆಯಬೇಕು ಎಂದರು.ನಿವೃತ್ತ ಶಿಕ್ಷಣಾಧಿಕಾರಿ ಪಾಪಣ್ಣ ಮಾತನಾಡಿದರು. ಪುರಸಭೆ ಉಪಾಧ್ಯಕ್ಷ ಸಿ.ಪಿ.ನಾಗರಾಜ್, ಜಿ.ಪಂ ಸದಸ್ಯೆ ಯಲ್ಲಮ್ಮ, ರಾಮಸ್ವಾಮಿ ರೆಡ್ಡಿ, ಪುರಸಭೆ ಸದಸ್ಯ ರಾಮಚಂದ್ರ, ವಾಲ್ಮೀಕಿ ಸಂಘದ ವೆಂಕಟರಾಮ್, ಬಂ.ನಾರಾಯಣಸ್ವಾಮಿ, ವೇಮನ, ತಬಲ ನಾರಾಯಣಸ್ವಾಮಿ ಮಾತನಾಡಿದರು. ಹಲವರು ಉಪಸ್ಥಿತರಿದ್ದರು.