ಮುಳಬಾಗಲು: ತಾಲ್ಲೂಕು ಹಾಗೂ ನೆರೆಯ ತಾಲೂಕುಗಳ ಸಾವಿರಾರು ಮಂದಿಗೆ ಮೂರು ದಿವಸಗಳ ಕಾಲ ಸಂಗೀತ ಸುಧೆ ನೀಡಿದ ಪುರಂದರ ಆರಾಧನಾ ಸಮಿತಿ ವಾರ್ಷಿಕ ಆರಾಧನೋತ್ಸವ ಸೋಮವಾರ ಮುಕ್ತಾಯವಾಯಿತು.
ಈ ವರ್ಷ ಭಾನುವಾರ ರಾತ್ರಿಯಿಡಿ ಬೆಂಗಳೂರು ನಗರದ ಸುಸ್ಧಿರ ಲಯ ಕಾಲೇಜು ಲಕ್ಷ್ಮಿನಾರಾಯಣ ಮ್ಯೂಸಿಕ್ ಆಕಾಡಮಿ ಟ್ರಸ್ಟ್ ವತಿಯಿಂದ ರಾತ್ರಿ ಇಡೀ ಸಂಪೂರ್ಣ ಸಂಗೀತ ಕಾರ್ಯಕ್ರಮ ನಡೆಯಿತು. ನಾಡಿನ ಹೆಸರಾಂತ ಸಂಗೀತ ಕಲಾವಿದರುಗಳು ಯಾವುದೇ ಭೇದ ಭಾವವಿಲ್ಲದೇ ಸ್ಧಳೀಯ ಸಂಗೀತ ಕಲಾವಿದರೊಂದಿಗೆ ಕೂಡಿ ಸಂಗೀತ ಸುಧೆಯನ್ನು ಹರಿಸಿದರು. ಅಂಧ ಮಾರುತಿಯವರು ಪುರಂದರ ಕೃತಿ ಆಕರ್ಷಕವಾಗಿತ್ತು. ಪಟ್ಟಣೆಗರ ಪರವಾಗಿ ಸಂತ ಸರ್ಮೊತ್ತಮದಾಸರು. ಚಂದ್ರಮೌಳಿ ಮತ್ತು ನಾ.ರಾಜರಾವ್ ಅವರುಗಳನ್ನು ಕೆಎಎಸ್ ಅಧಿಕಾರಿ ಚಿಕ್ಕವೆಂಕಟಪ್ಪ ಅವರು ಈ ಸಂದರ್ಭದಲ್ಲಿ ಸನ್ಮಾನಿಸಿದರು. ಚಂದ್ರಮೌಳಿ ಇದ್ದರು.