ವಿದ್ಯುತ್ ಕಡಿತ ವಿರೋಧಿಸಿ ಪ್ರತಿಭಟನೆ

Updated on: 

ಚಿಂತಾಮಣಿ: ರೈತರಿಗೆ ಸಮರ್ಪಕ ವಿದ್ಯುತ್ ನೀಡುವಲ್ಲಿ ಬೆಸ್ಕಾಂ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆಯ ನೂರಾರು ಕಾರ್ಯಕರ್ತರು ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
 ಪಟ್ಟಣದ ಪ್ರವಾಸ ಮಂದಿರದಿಂದ ಹೊರಟ ನೂರಾರು ರೈತರು ತಾಲೂಕಿನ ಬೆಸ್ಕಾಂ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.  
ವಿದ್ಯುತ್ ಅಭಾವದಿಂದ ರಾತ್ರಿ ಪೂರ ನಿದ್ದೆಗೆಟ್ಟು ಕರೆಂಟ್ ಎದುರು ನೋಡುವ ದುಸ್ಥಿತಿ ಒದಗಿದ ಹಿನ್ನೆಲೆಯಲ್ಲಿ ಸೋಮವಾರರಂದು ಬೆಸ್ಕಾಂ ಅಧಿಕಾರಿಗಳ ವಿರುದ್ಧ ದಿಕ್ಕಾರಗಳನ್ನು ಕೂಗುತ್ತಾ ವಿದ್ಯುತ್‌ಗಾಗಿ ಒತ್ತಾಯಿಸಿ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
  ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ. ಎಂದು ಹೇಳಿದ ನೂರಾರು 20 ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ತಾಲೂಕು ದಂಡಾಧಿಕಾರಿ ಎಂ.ಎನ್.ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.
ರೈತರು ಸಂಘ ಹಾಗೂ ಹಸಿರು ಸೇನೆಯ ಮುಂಖಂಡರಾದ ಎಂ.ಪಿ.ಬೈಯಪ್ಪರೆಡ್ಡಿ, ಕಾರ್ಯಾಧ್ಯಕ್ಷ ನಾರಾಯಣಸ್ವಾಮಿ,ಕೋನಪ್ಪ, ಗೌರವಾಧ್ಯಕ್ಷ ಪಿ.ಎಸ್.ನಾಗೇಶ್, ಬಿ.ಎಸ್.ವೆಂಕಟರವಣಪ್ಪ,ಅನಂತರೆಡ್ಡಿ,ಶ್ರೀರಾಮಪ್ಪ, ನರಸಿಂಹಪ್ಪ, ವೆಂಕಟರೆಡ್ಡಿ, ವೆಂಕಟಸುಬ್ಬಾರೆಡ್ಡಿ ಸೇರಿದಂತೆ ನೂರಾರು ರೈತರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com