ಕೋಲಾರ: ಅಂಚೆ ಸೇವೆ ನೀಡುವ ಮೂಲಕ ಜನತೆಯ ವಿಶ್ವಾಸ ಗಳಿಸಿರುವ ಅಂಚೆ ಇಲಾಖೆ ಈಗ ಅನುಷ್ಠಾನದಲ್ಲಿರುವ ಯೋಜನೆಗಳ ಜತೆಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸೋಲಾರ್ ದೀಪಗಳ ಮಾರಾಟಕ್ಕೆ ಮುಂದಾಗಿದೆ. ವಿದ್ಯುತ್ ಸಮಸ್ಯೆಯಿಂದ ವಿದ್ಯಾರ್ಥಿಗಳು ಸಹ ಸಂಕಷ್ಟಕ್ಕೆ ಗುರಿಯಾಗಿರುವುದನ್ನು ಅರಿತ ಅಂಚೆ ಇಲಾಖೆ ಕೈಗೆಟಕುವ ದರದಲ್ಲಿ ಸೋಲಾರ್ ದೀಪಗಳ ಮಾರಾಟಕ್ಕೆ ಮುಂದಾಗಿರುವುದು ನಾಗರಿಕರಿಗೆ ಕೊಂಚ ಮಟ್ಟಿಗೆ ಸಮಾಧಾನ ತಂದಿದೆ. ಈ ನಿಟ್ಟಿನಲ್ಲಿ ಅಂಚೆ ಇಲಾಖೆ ಹಿರಿಯ ಅಧೀಕ್ಷಕ ಹೆಚ್.ಆರ್. ವೀರಣ್ಣಗೌಡ್ ಅವರು ಸೋಲಾರ್ ದೀಪಗಳ ಬಗ್ಗೆ ತಮ್ಮ ಕಚೇರಿಗೆ ಬರುವ ಅಂಚೆ ಗ್ರಾಹಕರಿಗೆ ತಿಳಿವಳಿಕೆ ಮೂಡಿಸುತ್ತಿದ್ದಾರೆ.