ಬಂಗಾರಪೇಟೆ: ಕೂಸು ಹುಟ್ಟುವ ಮುನ್ನವೆ ಮಗುವಿಗೆ ಕುಲಾಯಿ ಹೊಲಿಸಿದರು ಎಂಬ ಗಾದೆಯಂತೆ ವಿಧಾನಸಭೆ ಚುನಾವಣೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಆಗಲೆ ಈಗ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎಂದು ಬಿಂಬಿತವಾಗಿರುವ ಎಂ. ರಾಮಚಂದ್ರ ವಾರದಿಂದ ಪ್ರಚಾರದಲ್ಲಿ ತೊಡಗಿದ್ದಾರೆ.
ಬೆಳಗ್ಗೆ ಸೂರ್ಯ ನೆತ್ತಿಯ ಮೇಲೆ ಬರುವ ಮೊದಲೆ ರಾಮಚಂದ್ರ ಮತ್ತು ಕಾರ್ಯಕರ್ತರು ಗ್ರಾಮಗಳಲ್ಲಿ ಪಾದಯಾತ್ರೆ ಮಾಡಿ ಮತಯಾಚನೆಯಲ್ಲಿ ತೊಡಗಿದ್ದಾರೆ. ಬೂದಿಕೋಟೆ ಹೋಬಳಿಯ ಗ್ರಾಮಗಳಲ್ಲಿ ಹಾಗೂ ಕಾಮಸಮುದ್ರ ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಸಂಚರಿಸಿ ರಾಮಚಂದ್ರ ಕೇಂದ್ರ ಸರ್ಕಾರದ ದುರಾಡಳಿತ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಿ ಯಾವುದೇ ಭ್ರಷ್ಟಾಚಾರವಿಲ್ಲದೆ ಸಂಪೂರ್ಣ ರೈತಪರ ಸರ್ಕಾರ ಅಧಿಕಾರಕ್ಕೆ ಬರಬೇಕೆಂದರೆ ಈ ಬಾರಿ ಜೆಡಿಎಸ್ನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ರಾಜ್ಯ ಮತ್ತು ಜಿಲ್ಲೆಯ ನಾಯಕರ ಭಾವಚಿತ್ರವುಲ್ಲ ಕರ ಪತ್ರಗಳನ್ನು ಹಂಚಿ ಮತ್ತು ಸಭೆ ಸಮಾರಂಬಗಳನ್ನು ನಡೆಸಿ ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬುವ ಕೆಲಸವನ್ನು ಮಾಡಲಾಗುತ್ತಿದೆ. ಈ ಹಿಂದೆ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ಹಿಂದೆ ಇತ್ತು. ಈಗ ರಾಮಚಂದ್ರ ಪಕ್ಷಕ್ಕೆ ಆಗಮನದಿಂದಾಗಿ ಸಂಘಟನೆ ಚುರುಕಾಗಿದೆ ರಾಮಚಂದ್ರ ಭೇಟಿ ನೀಡಿದ ಗ್ರಾಮಗಳಲ್ಲಿ ಅವರಿಗೆ ಭವ್ಯ ಸ್ವಾಗತ ದೊರೆಯುತ್ತಿರುವುದನ್ನು ಕಂಡು ಅನ್ಯ ಪಕ್ಷಗಳಿಂದಲೂ ಕಾರ್ಯಕರ್ತರು ಜೆಡಿಎಸ್ನತ್ತ ವಾಲುತ್ತಿದ್ದಾರೆಂದು ಹೇಳಿದರಲ್ಲದೆ ಶುಕ್ರವಾರ ಎಲ್ಲಾ ಸಮುದಾಯಗಳ ಮುಖಂಡರನ್ನು ಜತೆಗೂಡಿ ಪಟ್ಟಣದಲ್ಲಿ ಪಾದಯಾತ್ರೆ ಮೂಲಕ ಮತಯಾಚನೆ ಮಾಡುವುದಾಗಿ ಪಕ್ಷದ ತಾಲೂಕು ಅಧ್ಯಕ್ಷ ರಾಮಪ್ಪ ತಿಳಿಸಿದ್ದಾರೆ. ಅಭ್ಯರ್ಥಿ ಜತೆ ಹೊಸೂರು ಕೃಷ್ಣಪ್ಪ, ರಘುಪತಿಗೌಡ, ರಂಗನಾಥ್, ಶಿವಕುಮಾರ್, ಇರ್ಪಾನ್,ನಾರಾಯಣಗೌಡ, ಗುಟ್ಟಹಳ್ಳಿ ಮಂಜುನಾಥ್ ಮತ್ತಿತರರು ಇದ್ದರು.