ಶಿಡ್ಲಘಟ್ಟ: ತಾಲೂಕಿನ ನಡುಪಿನಾಯಕನಹಳ್ಳಿಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಆರೋಪಿಯನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು. ಪಟ್ಟಣದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆಯನ್ನು ನಡೆಸಿದ ಅವರು, ಅಪ್ರಾಪ್ತ ಬಾಲಕಿಯ ಮೇಲೆ ಆತ್ಯಾಚಾರವೆಸಗಿರುವ ಆರೋಪಿಯನ್ನು ಕೂಡಲೇ ಬಂಧಿಸಬೇಕು, ಸಾರ್ವಜನಿಕವಾಗಿ ಗಲ್ಲು ಶಿಕ್ಷಗೆ ಗುರಿಪಡಿಸಬೇಕೆಂದು ಆಗ್ರಹಿಸಿದರು. ತಾಲೂಕು ಅಂಗನವಾಡಿ ನೌಕರರ ಸಂಘದ ಮಾಜಿ ಅಧ್ಯಕ್ಷೆ ಸುನಂದಮ್ಮ ಪ್ರತಿಭಟನೆ ನೇತೃತ್ವವನ್ನು ವಹಿಸಿದ್ದರು.
'ಕರ್ತವ್ಯಪ್ರಜ್ಞೆಯಿಂದ ಯಶಸ್ಸು ಸಾಧ್ಯ'
ಮುಳಬಾಗಲು: ಅಂದಿನ ಕೆಲಸ ಅಂದೇ ಮಾಡುವ ಮೂಲಕ ಕೆಲಸದಲ್ಲಿ ಪರಿಪೂರ್ಣತೆ ಜೊತೆಗೆ ಜೀವನದಲ್ಲಿ ಯಶಸ್ಸು ಪಡೆಯಬಹುದು ಎಂದು ಮುಳಬಾಗಲು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಎಸ್. ವೆಂಕಟರಾಮಯ್ಯ ಹೇಳಿದರು. ತಾಲೂಕಿನ ಶಾಲಾ -ಕಾಲೇಜುಗಳ ಪ್ರಾಂಶುಪಾಲರು, ಉಪನಾಸಕರು, ಶಿಕ್ಷಕರು ತಾವು ನಿವೃತ್ತಿ ಹೊಂದುತ್ತಿರುವ ವೇಳೆಯಲ್ಲಿ ಗುರುವಾರ ನೀಡಿದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ಕಾರ್ಯದರ್ಶಿ ತಾಯಲೂರು ರಮೇಶ್, ತಾಯಲೂರು ಕಾಲೇಜಿನ ಪ್ರಾಂಶುಪಾಲ ವೆಂಕಟರಾಮಯ್ಯ, ಉಷಾಸಿಂದ್. ಮುನಿರೆಡ್ಡಿ, ಪಿ.ಸುಬ್ರಮಣಿ, ಉಪಪ್ರಾಂಶುಪಾಲ ನರಸಿಂಹಯ್ಯ ಪತ್ತಿಕುಂಟಿ, ನಾಗರಾಜ್, ಪ್ರಕಾಶ್, ಪತ್ತಿಮಿಟ್ಟೆ ನಾಗರಾಜ್, ಪ್ರಭಾರ ಪ್ರಾಂಶುಪಾಲ ಶ್ರೀನಿವಾಸ್ ಇತರರು ಇದ್ದರು.