ಕೋಲಾರ: ಕ್ಷೇತ್ರದ ಪ್ರತಿಯೊಂದು ಗ್ರಾಮ ಅಭಿವೃದ್ಧಿ ಪಡಿಸಲು ತಾವು ಸರ್ಕಾರದಿಂದ ಹೆಚ್ಚು ಅನುದಾನ ಬಿಡುಗಡೆ ಮಾಡಿಸಿರುವುದಲ್ಲದೆ, ತಮ್ಮ ಸ್ವಂತ ಹಣದಿಂದಲೂ ಸಮಾಜ ಸೇವೆ ಮಾಡುತ್ತಾ ಬಂದಿದ್ದು, ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಮತದಾರರು ಮುಂದಿನ ಚುನಾವಣೆಯಲ್ಲೂ ಆಶೀರ್ವಾದ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವರ್ತೂರ್ ಪ್ರಕಾಶ್ ಮನವಿ ಮಾಡಿದರು.
ತಾಲೂಕಿನ ಚುಂಚುದೇನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಡಾಂಬರು ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಲಾಗುವುದು, ಗ್ರಾಮದ ಜನತೆ ನನ್ನ ವಿರೋಧಿಗಳ ಅಪಪ್ರಚಾರಗಳಿಗೆ ಕಿವಿಗೊಡದೆ ತಮ್ಮನ್ನು ಬೆಂಬಲಿಸುವಂತೆ ಅವರು ತಿಳಿಸಿದರು.
ದರಖಾಸ್ತು ಸಮಿತಿ ಅಧ್ಯಕ್ಷ ಬೆಗ್ಲಿ ಪ್ರಕಾಶ್, ನಗರಸಭೆ ಮಾಜಿ ಅಧ್ಯಕ್ಷ ರಘುರಾಂ, ಗ್ರಾಪಂ ಸದಸ್ಯರಾದ ಸಂತೋಷಪ್ಪ, ನಾಗರಾಜಪ್ಪ, ಸ್ಥಳೀಯರಾದ ಶ್ರೀರಾಮ್, ನವೀನ್, ನಾಗರಾಜ್, ದೇವರಾಜ್, ಶಿವರಾಮ್, ರಾಜಣ್ಣ, ಅಮರೇಶ್, ಆನಂದಪ್ಪ, ನಾಗರಾಜಪ್ಪ ಇದ್ದರು.