ನಾಳೆ ಕಾಂಗ್ರೆಸ್ ನಾಯಕರ ಸಭೆ

Updated on: 

ಬಂಗಾರಪೇಟೆ:  ಪುರಸಭೆ ಚುನಾವಣೆ ಹಿನ್ನೆಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಲುವಾಗಿ ಫೆ.18ರಂದು ಬೆಳಗ್ಗೆ 11 ಗಂಟೆಗೆ ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಆಕಾಂಕ್ಷಿ ಅಭ್ಯರ್ಥಿಗಳ ಹಾಗೂ ಕಾರ್ಯಕರ್ತರ ಸಭೆ ಕರೆಯಲಾಗಿದೆ.
ಚುನಾವಣೆ: ಫ್ಲೆಕ್ಸ್, ಬ್ಯಾನರ್ ತೆರವು
ಕೆಜಿಎಫ್:  ರಾಜ್ಯಾದ್ಯಂತ ನಗರಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆ ಕೆಜಿಎಫ್ ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನಗರದ ಸೂರಜ್‌ಮುಲ್ ವೃತ್ತ, ಗಾಂಧಿ ವೃತ್ತ, ಎಂ.ಜಿ. ಮಾರುಕಟ್ಟೆ ಸೇರಿದಂತೆ ಇತರೇ ಮುಖ್ಯ ರಸ್ತೆಗಳಲ್ಲಿ ರಾಜಕೀಯ ಪಕ್ಷಗಳು ಹಾಗೂ ಸಂಘ ಸಂಸ್ಥೆಗಳ ಫ್ಲೆಕ್ಸ್‌ಗಳು, ಬ್ಯಾನರ್‌ಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಚಾಲನೆ ನೀಡಿದರು.
ಕೆಲ ತಿಂಗಳಿಂದ ಫ್ಲೆಕ್ಸ್, ಬ್ಯಾನರ್‌ಗಳನ್ನು ನಗರದ ಪ್ರಮುಖ ರಸ್ತೆಗಳು ಹಾಗೂ ವೃತ್ತಗಳಲ್ಲಿ ಹಾಕಿದ್ದರಿಂದ ವ್ಯಾಪಾರಸ್ಥರಿಗೆ, ವಾಹನ ಚಾಲಕರಿಗೆ ಹಾಗೂ ಪಾದಾಚಾರಿಗಳಿಗೆ ಕಿರಿಕಿರಿ ಉಂಟಾಗುತ್ತಿದೆ. ನಗರಸಭೆ ಸಿಬ್ಬಂದಿಗಳಿಂದ ತೆರವುಗೊಳಿಸುವ ಕಾರ್ಯಾಚರಣೆ ಪ್ರಾರಂಭಿಸುತ್ತಿದ್ದಂತೆ ಸಾರ್ವಜನಿಕರು, ವ್ಯಾಪಾರಸ್ಥರು ನಿಟ್ಟುಸಿರು ಬಿಡುವಂತಾಗಿತ್ತು. ಈ ವೇಳೆ ನಗರಸಭೆ ಸಿಬ್ಬಂದಿಗಳಾದ ಅಂಬೀಶ್, ಹಿರಿಯ ಆರೋಗ್ಯಾಧಿಕಾರಿ ಸರಸ್ವತಿ ಹಾಜರಿದ್ದರು.
ಈ ಬಾರಿ ನಾಮಪತ್ರ ಸಲ್ಲಿಕೆ ಸುಲಭವಲ್ಲ
ಕೋಲಾರ: ಮುಂದಿನ ಮಾ.7 ರಂದು ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಶನಿವಾರ ಆಧಿಸೂಚನೆ ಪ್ರಕಟಗೊಂಡಿದ್ದು, ಈ ಬಾರಿ ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಲು ಸಾಕಷ್ಟು ಎಚ್ಚರ ವಹಿಸಬೇಕಾಗಿದೆ. ಸಂಬಂಧಪಟ್ಟ ಚುನಾವಣಾಧಿಕಾರಿಯಿಂದ ನಿಗದಿತ ಶುಲ್ಕ ಪಾವತಿಸಿ ನಾಮಪತ್ರ ಪಡೆದ ನಂತರ ಕನಿಷ್ಟ ಐದು ಮಂದಿ ಸೂಚಕರ ಹೆಸರು, ವಿಳಾಸ, ಸಹಿ ಹಾಗೂ ಫೋಟೋ ಲಗತ್ತಿಸುವುದನ್ನು ಕಡ್ಡಾಯ ಮಾಡಲಾಗಿದೆ. ಹಾಗೆಯೇ ಅಭ್ಯರ್ಥಿ ಸಹ ತಮ್ಮ ಭಾವಚಿತ್ರ ಅರ್ಜಿಯೊಂದಿಗೆ ಲಗತ್ತಿಸಿ ನೀಡಬೇಕಾಗಿದೆ. ಈ ಪದ್ಧತಿ ಈ ಹಿಂದಿನ ಚುನಾವಣೆಯಲ್ಲಿ ಇರಲಿಲ್ಲವೆಂಬುದು ಅನೇಕರ ವಾದವಾಗಿದೆ. ಉಮೇದುವಾರರು ಜಾತಿ, ಮನೆ ವಿಳಾಸ, ಆಸ್ತಿ ವಿವರ ಸೇರಿದಂತೆ ಇನ್ನಿತರ ಮಾಹಿತಿಗೆ ಸಂಬಂಧಿಸಿದ ಪ್ರಮಾಣ ಪತ್ರ, ಸರ್ಕಾರಿ ನೋಟರಿ ಮೂಲಕ ಸಿದ್ಧಪಡಿಸಿ ಅರ್ಜಿ ಜತೆ ಸಲ್ಲಿಕೆ ಮಾಡದಿದ್ದ ಪಕ್ಷದಲ್ಲಿ ನಾಮಪತ್ರ ತಿರಸ್ಕೃತಗೊಳ್ಳುವ ಸಾಧ್ಯತೆಗಳಿವೆ. ಪ್ರಮಾಣ ಪತ್ರದಲ್ಲಿ ಏನಾದರೂ ಸುಳ್ಳು ಮಾಹಿತಿ ಕಂಡು ಬಂದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡುವುದಕ್ಕೆ ಚುನಾವಣಾ ಆಯೋಗ ಸಂಬಂಧಪಟ್ಟ ಚುನಾವಣಾಧಿಕಾರಿಗೆ ಅಧಿಕಾರ ನೀಡಿದೆ. ಒಂದು ವೇಳೆ ಚುನಾವಣೆ ನಂತರ ಗೆದ್ದ ಮೇಲೂ ಯಾರಾದರೂ ದೂರು ನೀಡಿದಲ್ಲಿ, ಸದಸ್ಯತ್ವ ರದ್ಧುಪಡಿಸುವ ಅಧಿಕಾರವನ್ನು ಜಿಲ್ಲಾ ಚುನಾವಣಾಧಿಕಾರಿಗೆ ನೀಡಿರುವುದರಿಂದ ಈ ಬಾರಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವುದು ಅಷ್ಟು ಸುಲಭವಾಗಿಲ್ಲ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com