ಕೆಜಿಎಫ್: ಅನಾರೋಗ್ಯ ಕಾರಣ ಗೃಹಿಣಿಯೊಬ್ಬರು ಮೃತ ಪಟ್ಟಿರುವ ಘಟನೆ ಬೇತಮಂಗಲ ಗ್ರಾಮದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮದುವೆಯಾದ 3 ತಿಂಗಳಲ್ಲೇ ಸಾವನ್ನಪ್ಪಿರುವುದು ಸಂಶಯಕ್ಕೆಡೆ ಮಾಡಿದೆ.
ಜಿಲ್ಲೆಯ ಮಾಲೂರು ಪಟ್ಟಣದ ನಿವಾಸಿ ಗೌರಮ್ಮ ಎಂಬವರ ಮಗಳಾದ ಶೈಲಾ(23) ಮೃತಪಟ್ಟಿರುವವರು. ಶೈಲಾರನ್ನು ಕಳೆದ ಮೂರು ತಿಂಗಳ ಹಿಂದೆ ಕೆಜಿಎಫ್ ಕ್ಷೇತ್ರದ ಬೇತಮಂಗಲ ಗ್ರಾಮ ಹೋಬಳಿ ದೇವರಹಳ್ಳಿ ನಿವಾಸಿ ಕುಮಾರ್ ಎಂಬವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಶುಕ್ರವಾರದಂದು ಶೈಲಾಗೆ ಆರೋಗ್ಯ ಸರಿಯಿಲ್ಲದ ಕಾರಣ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟರು. ಮಗಳಿಗೆ ಯಾವುದೇ ರೀತಿಯ ಕಾಯಿಲೆ ಇರಲಿಲ್ಲ. ಸಾವಿನ ಬಗ್ಗೆ ಸಂಶಯವಿದ್ದು ಕಾರಣ ಪತ್ತೆಹಚ್ಚುವಂತೆ ಕೋರಿ ಮೃತಪಟ್ಟ ಶೈಲಾಳ ತಾಯಿ ಗೌರಮ್ಮ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಬೇತಮಂಗಲ ಠಾಣೆಯಲ್ಲಿ ದೂರು ದಾಖಲಾಗಿದೆ. ಮರಣೋತ್ತರ ಪರೀಕ್ಷೇಗಾಗಿ ಶೈಲಾ ಮೃತದೇಹ ಕೆಜಿಎಫ್ನ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ.