ಮುಳಬಾಗಲು: ದೇಶದ ಪ್ರಗತಿಗೆ ಶಿಕ್ಷಣ ಅತಿ ಮುಖ್ಯ ಎಂದು ಮುಳಬಾಗಲು ಡಿವೈಎಸ್ಪಿ ಸಿದ್ದರಾಮಯ್ಯ ಹೇಳಿದರು.
ಪಟ್ಟಣದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಭಾನುವಾರ ಶ್ರೀವಾಸವಿ ವಿದ್ಯಾನಿಕೇತನ್ ವತಿಯಿಂದ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣ ಪಡೆದರೇ ಮಾತ್ರ ಭವಿಷ್ಯದಲ್ಲಿ ಉತ್ತಮ ಜೀವನ ನಡೆಸಲು ಸಾಧ್ಯ. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಶಿಸ್ತು -ಸಂಯಮ ರೂಢಿಸಿಕೊಳ್ಳಬೇಕು ಎಂದರು.
ಗ್ರಾಮಾಂತರ ಪ್ರದೇಶದ ಮಕ್ಕಳು ಹೆಚ್ಚಿನ ಪ್ರತಿಭಾವಂತರಾಗಿದ್ದು, ಶಿಕ್ಷಕರು ಅವರ ಪ್ರತಿಭೆಯನ್ನು ಹೊರತರಲು ಶ್ರಮಿಸಬೇಕು ಎಂದರು.
ಜಿಪಂ ಸದಸ್ಯೆ ತೇಜಸ್ವಿನಿ ಉವರು 6ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿನಿ ರೋನ ಚವಾಕ್ ಅವರಿಗೆ ನಗದು ಬಹುಮಾನ ವಿತರಿಸಿದರು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ವಾಸವಿ ವಿದ್ಯಾನಿಕೇತನ ಅಧ್ಯಕ್ಷ ಕೆ.ಎಂ. ನಾರಾಯಣಮೂರ್ತಿ, ಕಾರ್ಯದರ್ಶಿ ಟಿ.ಆರ್. ನಾಗರಾಜ್, ಉಪಾಧ್ಯಕ್ಷ ಡಾ.ನರೇಂದ್ರ, ಕೆ.ಪಿ. ಆನಂದ್, ನಿರ್ದೇಶಕರಾದ ವರದರಾಜ್, ಬಿ.ಎ.ನಾರಾಯಣಮೂರ್ತಿ, ಕೆ.ಎಸ್.ನಾಗೇಶ್ಬಾಬು, ಜೆ.ಡಿ. ರವಿಕುಮಾರ್, ಅರುಣಾ ನಾಗೇಶ್, ನಿರ್ಮಲ, ಸಮಾಜ ಸೇವಕ ಕೆ.ವಿ.ರೆಡ್ಡಿ ಭಾಗವಹಿಸಿದ್ದರು.