ಐತೀರ್ಪು ಬೇಡ: ಕರವೇ ಒತ್ತಾಯ

Updated on: 

ಚಿಂತಾಮಣಿ: ಕಾವೇರಿ  ಐತೀರ್ಪನ್ನು ಗಜೆಟ್‌ನಲ್ಲಿ ಪ್ರಕಟಿಸದೆ ತಡೆಯಲು ಕೋರಿ ಒತ್ತಾಯಿಸಿ ಕರವೇ ನೂರಾರು ಕಾರ್ಯಕರ್ತರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ನೂರಾರು ಕರವೇ ಕಾರ್ಯಕರ್ತರು 2007ರಲ್ಲಿ ಅಂತಿಮ ಹೈತೀರ್ಪನ್ನು ಪ್ರಕಟಿಸಿ ಕರ್ನಾಟಕ ಜನತೆಗೆ ಅನ್ಯಾಯ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಕೇಂದ್ರ ಸರ್ಕಾರದ ವಿರುದ್ಧ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಂತರ ತಾಲೂಕು ಕಚೇರಿ ಎದುರು ಜಮಾಯಿಸಿದ್ದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಎಂ.ಆರ್.ಲೋಕೇಶ್ ಮಾತನಾಡಿ, ಹೈತೀರ್ಪು ನ್ನು ಗೆಜೆಟ್‌ನಲ್ಲಿ ಪ್ರಕಟಿಸಬಾರದೆಂದು ಮನವಿ ಸಲ್ಲಿಸಿದಾಗ ಪ್ರಧಾನಮಂತ್ರಿಗಳು ಅದಕ್ಕೆ ಸ್ಪಂದಿಸಿ ತಡೆದಿದ್ದರು. ಆದರೆ, ಪ್ರಸ್ತುತ ಕಾವೇರಿ ಹೈತೀರ್ಪನ್ನು ಪ್ರಕಟಿಸಲು ಯತ್ನಿಸುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ನಿಟ್ಟಿನಲ್ಲಿ ರಾಜ್ಯಪಾಲರು ತಾವು ಮದ್ಯ ಪ್ರವೇಶಿಸಿ ಕಾವೇರಿ ವಿಷಯದಲ್ಲಿ ನಾಡಿಗಾಗುತ್ತಿರುವ ಅನ್ಯಾಯವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಕರ್ನಾಟಕ ಜನತೆಗೆ ನ್ಯಾಯ ದೊರಕಿಸಿಕೊಡಬೇಕೆಂದು ಎಂ.ಆರ್.ಲೋಕೇಶ್ ಆಗ್ರಹಿಸಿದರು. ತಾಲೂಕು ಕರವೇ ಅಧ್ಯಕ್ಷ ಚೀ.ನಾ.ಅಂಬರೀಷ್, ಪ್ರಧಾನ ಕಾರ್ಯದರ್ಶಿ,ರಮೇಶ್, ನಗರ ಘಟಕದ ಅಧ್ಯಕ್ಷ ಶಬೀರ್ ಅಹಮದ್,ಮುಖಂಡರಾದ ವಿ.ಎಂ.ನಾರಾಯಣಸ್ವಾಮಿ, ಅಮರನಾಥ್, ಕೃಷ್ಣಾರೆಡ್ಡಿ, ಶಂಕರ, ಚಂದ್ರಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com