ಶಿರಡಿಗೆ ಅಕ್ಕಿ, ತರಕಾರಿ ರವಾನೆ

Updated on: 

ಮಾಲೂರು: ಇಲ್ಲಿನ ಶಿರಡಿ ಸಾಯಿಬಾಬಾ ಸೇವಾ ಟ್ರಸ್ಟ್, ಮಂಜುನಾಥ ಸ್ವಾಮಿ ಸೇವಾ ಸಮಿತಿಯ ಸಹಕಾರದಲ್ಲಿ ಬುಧವಾರ ಶಿರಡಿ ಸಾಯಿಬಾಬಾ ದೇವಾಲಯಕ್ಕೆ ರೈಲಿನ ಮುಖಾಂತರ ಅಕ್ಕಿ, ತರಕಾರಿ ಕಳುಹಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟ್ ಕಾರ್ಯದರ್ಶಿ ಶ್ರೀನಿವಾಸರೆಡ್ಡಿ, ದೇಶದೆಲ್ಲೆಡೆಗಳಿಂದ ಪ್ರತಿನಿತ್ಯ ಲಕ್ಷಾಂತರ ಭಕ್ತಾದಿಗಳು ಶಿರಡಿಗೆ ಹೋಗುತ್ತಿದ್ದು, ಅವರಿಗಾಗಿ ದೇವಾಲಯದಲ್ಲಿ ನಡೆಯಲಿರುವ ಅನ್ನದಾಸೋಹಕ್ಕೆ ಸಹಕಾರಿಯಾಗುವ ಉದ್ದೇಶದಿಂದ ತಾಲೂಕಿನ ಜನತೆ ನೀಡುವ ತರಕಾರಿಗಳನ್ನು ಹಾಗೂ ವಿಶೇಷವಾಗಿ ದಕ್ಷಿಣ ಭಾರತೀಯರಿಗಾಗಿ ಅಕ್ಕಿ ಮೂಟೆ ಕಳುಹಿಸಲಾಗುತ್ತಿದೆ ಎಂದರು. ಪ್ರತಿ ಬುಧವಾರ ಈ ಮಾರ್ಗದಲ್ಲಿ ಚಲಿಸಲಿರುವ ಚೆನ್ನೈ- ಶಿರಡಿ ಎಕ್ಸ್‌ಪ್ರೆಸ್‌ನಲ್ಲಿ ಒಂದು ವಾರವೂ ತಪ್ಪದಂತೆ ತರಕಾರಿ, ಅಕ್ಕಿ ಬೇಳೆ ಕಳುಹಿಸಲಾಗುತ್ತದೆ ಎಂದರು. ಮಂಜುನಾಥ ಸ್ವಾಮಿ ಸೇವಾ ಸಮಿತಿಯ ವರಕುಮಾರ್ ಗೌಡ ಮಾತನಾಡಿ, ಪ್ರತಿ ತಿಂಗಳು ಧರ್ಮಸ್ಥಳಕ್ಕೆ ತರಕಾರಿ ಕಳುಹಿಸಲಾಗುತ್ತಿದ್ದು, ದಾನಿಗಳು, ರೈತರು ನೀಡುತ್ತಿರುವ ತರಕಾರಿಗಳನ್ನು ಪ್ರತಿವಾರ ಶಿರಡಿಗೆ ಕಳುಹಿಸಲು ನಿರ್ಧರಿಸಿದ್ದೇವೆ ಎಂದರು. ಸಾಯಿ ಮಂಜು, ಓಬಳಾ ರೆಡ್ಡಿ, ಸೋಮಾ, ಸುರೇಶ್, ಪಾಪರೆಡ್ಡಿ, ಅರಳೇರಿ ಪಂಚಾಯಿತಿ ಸದಸ್ಯ ಕುಮಾರ್ ಇದ್ದರು. ಇದೇ ಸಂದರ್ಭದಲ್ಲಿ ಚೆನ್ನೈ ಎಕ್ಸ್‌ಪ್ರೆಸ್‌ನಲ್ಲಿ 11 ಮೂಟೆ ಅಕ್ಕಿ, 15 ಮೂಟೆ ಉಪ್ಪು, 5 ಟಿನ್ ಎಣ್ಣೆ ಹಾಗೂ 1500 ಕೆಜಿ ಕುಂಬಳ ಕಾಯಿಯನ್ನು ಕಳುಹಿಸಿಕೊಡಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com