ಚಿಂತಾಮಣಿ: ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆಯನ್ನು ಸಂಪುಟದಿಂದ ವಜಾಗೊಳಿಸಲು ತಾಲೂಕು ಬಿಜೆಪಿ ಘಟಕ ಆಗ್ರಹಿಸಿದೆ.
ಕೇಂದ್ರದಲ್ಲಿ ಯುಪಿಎ ಸರ್ಕಾರ ಬಂದಾಗಿನಿಂದ ಹಿಂದುಗಳಿಗೆ ರಕ್ಷಣೆಯಿಲ್ಲದೆ ಇರುವುದು ವಿಷಾದದ ಸಂಗತಿ. ದೇಶದಲ್ಲಿ ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳಲ್ಲಿ ಕೋಮು ಗಲಭೆಗಳನ್ನು ಸೃಷ್ಟಿಸಿ ಅರಾಜಕತೆ ಹುಟ್ಟುಹಾಕಲಾಗುತ್ತಿದೆ. ಬಿಜೆಪಿ ಇತರೆ ಪಕ್ಷಗಳು ಆಡಳಿತ ನಡೆಸುತ್ತಿರುವ ಇತರೆ ರಾಜ್ಯಗಳಲ್ಲಿ ಯಾವುದೆ ರೀತಿಯ ಕೋಮು ಗಲಭೆಗಳಿಗೆ ಅವಕಾಶವಿರದೆ ಉತ್ತಮ ಆಡಳಿತ ನೀಡುತ್ತಿವೆಯೆಂದು ತಾಲೂಕು ಘಟಕದ ಬಿಜೆಪಿ ಮುಖಂಡರಾದ ಪ್ರಶಾಂತ್ ಗೋವಿಂದರೆಡ್ಡಿ, ಶಿವಾರೆಡ್ಡಿ, ಎಂ.ಎನ್. ಮಂಜುನಾಥ್ ತಿಳಿಸಿದ್ದಾರೆ.
ಕೇಂದ್ರ ಸಚಿವ ಸುನೀಲ್ ಕುಮಾರ್ ಶಿಂಧೆ ಹಿಂದುತ್ವ ಹಾಗೂ ಆರ್‌ಎಸ್‌ಎಸ್ ಬಗ್ಗೆ ಹಗುರವಾಗಿ ಮಾತನಾಡಿ ಹಿಂದುಗಳನ್ನು ಭಯೋತ್ಪಾದಕರಿಗೆ ಹೋಲಿಸಿ ಮಾತನಾಡಿರುವುದು ವಿಷಾದನೀಯ ಸಂಗತಿ. ಆದ ಕಾರಣ ಸುಶೀಲ್ ಕುಮಾರ್ ಶಿಂಧೆಯನ್ನು ಈ ಕೂಡಲೇ ಸಂಪುಟದಿಂದ ವಜಾ ಮಾಡಬೇಕೆಂದು ನಾರಾಯಣಸ್ವಾಮಿ, ಗೋವಿಂದರಾಜು, ಆಂಜಪ್ಪ, ಶ್ರೀನಿವಾಸ, ಮಂಜುನಾಥಸ್ವಾಮಿ ಸೇರಿದಂತೆ ಇನ್ನೂ ಹಲವಾರು ಆಗ್ರಹಿಸಿದ್ದಾರೆ.