ಪಾ.ಶ್ರೀ. ಅನಂತರಾಮ್
ಕನ್ನಡಪ್ರಭ ವಾರ್ತೆ, ಕೋಲಾರ, ಸೆ.8
'ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ' ಜನ ಏನೆನೋ ಮಾಡುತ್ತಾರೆ. ಅದರಲ್ಲಿ ರಸ್ತೆ ಬದಿಯಲ್ಲಿ ನಡೆಯುವ ಅಲೆಮಾರಿಗಳ ಅಪಾಯಕಾರಿ ಸಾಹಸ ಪ್ರದರ್ಶನವು ಒಂದು.
ಮುಂಚೆ ಹಾವು-ಮುಂಗಸಿ, ಕಾಡು ಬೆಕ್ಕು, ಕರಡಿ, ಕೋತಿ, ಚಿಂಪಾಂಜಿ ಇನ್ನಿತರ ಪ್ರಾಣಿಗಳನ್ನು ಜೊತೆಗೆ ಕರೆ ತಂದು ಸಾಹಸ ಪ್ರದರ್ಶನ, ಮನರಂಜನೆ ನೀಡುತ್ತಿದ್ದ ಅಲೆಮಾರಿಗಳು ಪ್ರಾಣಿಗಳನ್ನು ಬಳಸಬಾರದೆಂದು ಸರ್ಕಾರ ಆದೇಶ ಹೊರಡಿಸಿದ ಬಳಿಕ ತಾವೇ ಅಪಾಯಕಾರಿ ಸಾಹಸ ಪ್ರದರ್ಶನ, ಮನರಂಜನೆ ನೀಡುವ ಮೂಲಕ ಬದುಕಿನ ಬಂಡಿ ಮುಂದೆ ಸಾಗಲು ಕಸರತ್ತು ನಡೆಸುತ್ತಿದ್ದಾರೆ.
ನಗರದ ಎಂ.ಜಿ. ರಸ್ತೆಯಲ್ಲಿ ತಾಯಿ ಮತ್ತು ಆಕೆಯ ಇಬ್ಬರು ಮಕ್ಕಳು ಹೊಟ್ಟೆ ಪಾಡಿಗಾಗಿ ನೀಡಿದ ಪ್ರದರ್ಶನ ನೋಡುವುದಕ್ಕೆ ರೋಚಕವಾಗಿತ್ತಾದರೂ ಬದುಕಿಗಾಗಿ ಇಷ್ಟೊಂದು ಕಷ್ಟಪಡಬೇಕೇ ಎಂಬ ಪ್ರಶ್ನೆ ಅನೇಕರನ್ನು ಕಾಡಿದೆ ಇರಲಿಲ್ಲ.
ದೇಶದ ಸ್ಥಿತಿಗೆ ಕನ್ನಡಿ: ಶಾಲೆಗೆ ಸೇರಿ ಆಟ-ಪಾಠ ಕಲಿತು ತನ್ಮೂಲಕ ದೇಶದ ಸತ್ಪ್ರಜೆಯಾಗಬೇಕಾದ ಈ ಇಬ್ಬರು ಮಕ್ಕಳು ತಾಯಿಯ ಜೊತೆ ಬಿಸಿಲು, ಗಾಳಿ, ಮಳೆ ಲೆಕ್ಕಿಸದೆ ರಸ್ತೆ ಬದಿಯಲ್ಲಿ ಬದುಕಿನ ಬಂಡಿ ತಳ್ಳಲು ಪಡುತ್ತಿದ್ದ ಕಷ್ಟ ಗಮನಿಸಿದರೆ ಸರ್ಕಾರಗಳು ಜಾರಿಗೆ ತರುವ ಯೋಜನೆಗಳು ಈ ಜನರಿಗೆ ಏಕೆ ತಲುಪಲು ಸಾಧ್ಯವಾಗುತ್ತಿಲ್ಲವೆಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ತನ್ನ ಇಬ್ಬರು ಬಾಲಕರನ್ನು ಸಾಹಸ ಪ್ರದರ್ಶನಕ್ಕೆ ಬಳಕೆ ಮಾಡಿಕೊಂಡ ತಾಯಿ, “«ÚÈÚßVæ ಬದುಕಲು ಬೇರೆ ದಾರಿ ಇಲ್ಲ, ಯಾರೂ ನನಗೆ ಕೆಲಸ ಕೊಡಲ್ಲ, ಚಿಕ್ಕ ವಯಸ್ಸಿನಿಂದಲೂ ನಾನು ಬೀದಿಯಲ್ಲಿ ಸಾಹಸ ಮಾಡಿಯೇ ಜೀವನ ನಡೆಸುತ್ತಿದ್ದೇನೆ, ಗಂಡ ಇಲ್ಲ, ಹೆಣ್ಣು ಮಗಳು ಮತ್ತು ಮಗನನ್ನು ಸಾಕಲು ಬೇರೆ ದಾರಿ ಇಲ್ಲ, ಅಲೆಮಾರಿಗಳಾದ ನಮಗೆ ಬದುಕಲು ಬೇರೆ ದಾರಿಯೇ BÄÇ’ÈæM¥Úß ಹೇಳಿದ ಮಾತು ನಮ್ಮ ದೇಶದ ಬಡ ಜನರ ಸ್ಥಿತಿಯನ್ನು ಪ್ರತಿಬಿಂಬಿಸುವ ಕನ್ನಡಿಯಂತೆ ಕಾಣಿತು.
ರಾತ್ರಿ ಊಟಕ್ಕೆ ನೀರೇ ಗತಿ!: ನಮ್ಮದು ಉತ್ತರ ಭಾರತ. ಟ್ರೈನು, ಬಸ್ಸುಗಳಲ್ಲೇ ದೇಶ ಸುತ್ತಾಡುತ್ತೇವೆ. ದೇವಾಲಯ, ಶಾಲೆ ಆವರಣದಲ್ಲಿ ತಂಗುತ್ತೇವೆ, ಪ್ರತಿ ದಿನ ಯಾವುದಾದರೊಂದು ಊರಿನ ಬಸ್ ನಿಲ್ದಾಣ, ಸಂತೆ ನಡೆಯುವ ಸ್ಥಳ, ಪ್ರಮುಖ ರಸ್ತೆ, ವೃತ್ತಗಳಲ್ಲಿ ಸಾಹಸ ಪ್ರದರ್ಶನ ನೀಡುತ್ತೇವೆ, ಒಂದು ಪ್ರದರ್ಶನಕ್ಕೆ 20ರಿಂದ 30 ಸಿಗುತ್ತದೆ.
ಹೆಚ್ಚು ಅಂದರೆ ದಿನಕ್ಕೆ ಮೂರು ಪ್ರದರ್ಶನ ನೀಡಲು ಸಾಧ್ಯ, ಇದರಿಂದ ದಿನಕ್ಕೆ 90ರಿಂದ 120 ರು. ಸಂಪಾದನೆ ಆಗುತ್ತೆ. ಮೂವರಿಗೆ ಕನಿಷ್ಠ ದಿನಕ್ಕೆ 150 ರು. ಬೇಕು. ಕಡಿಮೆ ಹಣ ಸಂಗ್ರಹಣೆಯಾದಾಗ ಒಂದು ಹೊತ್ತು ಮಾತ್ರ ಹೊಟ್ಟೆ ತುಂಬ ಊಟ ಮಾಡಿ ರಾತ್ರಿ ನೀರು ಕುಡಿದು ಮಲಗುತ್ತೇವೆಂದು ಹೇಳಿದಾಗ ಆ ಹೆಂಗಸಿನ ಕಣ್ಣಂಚಿನಲ್ಲಿ ನೀರು ಹೆಪ್ಪುಗಟ್ಟಿತು.
ಅಪಾಯಕಾರಿ ಸಾಹಸ: ಅಪ್ರಾಪ್ತ ವಯಸ್ಸಿನ ಹೆಣ್ಣು ಮಗಳು ತಾಯಿಯ ಜೊತೆ ಸಾಹಸ ಪ್ರದರ್ಶನ ನೀಡುತ್ತಾಳೆ, ಅದೇ ರೀತಿ ಮಗನು ಸಹ ಜನರ ಮನ ಕಲಕುವ ರೀತಿಯಲ್ಲಿ ವಿವಿಧ ಭಂಗಿಗಳಲ್ಲಿ ಅಪಾಯಕಾರಿ ಸಾಹಸ ಪ್ರದರ್ಶನ ನೀಡುತ್ತಾನೆ.
ಇನ್ನು ತಾಯಿ ರಸ್ತೆ ಬದಿಯಲ್ಲಿ ಮಲಗಿ, ಬಟ್ಟೆಯೊಂದನ್ನು ಮುಖದ ಮೇಲೆ ಹಾಕಿಕೊಳ್ಳುತ್ತಾಳೆ, ಮಗ ತಾಯಿಯ ಎದೆಯ ಮೇಲೆ ಕಲ್ಲಿನ ಚಪ್ಪಡಿಯೊಂದನ್ನು ಇಟ್ಟು ಸುತ್ತಿಗೆಯಿಂದ ಒಡೆದು ತುಂಡಾಗಿಸುತ್ತಾನೆ, ಈ ದೃಶ್ಯ ನಿಜಕ್ಕೂ ನೋಡುಗರ “Èæßç ÁÚhßM’ ಏನಿಸದೆ ಇರಲಾರದು, ಕೆಲ ಜನರು ಇದೆಲ್ಲ ಇವರಿಗೆ ಅಭ್ಯಾಸವಾಗಿರುತ್ತದೆ, ಜಾದು ಮಾಡುತ್ತಾರೆ, ಕಷ್ಟ ಪಟ್ಟು ದುಡಿದು ಸಂಪಾದಿಸಲು ಯೋಗ್ಯತೆ ಇಲ್ಲದೆ ಈ ರೀತಿ ಬೀದಿಯಲ್ಲಿ ಆಟವಾಡಿ ಹಣ ಸಂಗ್ರಹಣೆ ಮಾಡುತ್ತಾರೆಂದು ಹೇಳಿದ್ದು ಉಂಟು.
ಏನೇ ಆಗಲಿ, ಹೊಟ್ಟೆಪಾಡಿಗಾಗಿ ನಮ್ಮ ಜನ ಏನೆಲ್ಲಾ ಮಾಡುತ್ತಾರೆಂಬುದಕ್ಕೆ ಅಲೆಮಾರಿಗಳ ಜೀವನದಾಟ ಒಂದು ಸಣ್ಣ ಉದಾಹರಣೆ. ಸರ್ಕಾರ, ಸಮಾಜ ಈ ರೀತಿ ಹಾದಿ ಬೀದಿಗಳಲ್ಲಿ ಅಪಾಯಕಾರಿ ಸಾಹಸ ಪ್ರದರ್ಶನ ನೀಡುವ ಜನರ ಬಗ್ಗೆ ಅನುಕಂಪ ತೋರಿ 5-10 ರುಪಾಯಿ ಕೊಟ್ಟು ಜವಾಬ್ದಾರಿ ಮುಗಿಯಿತು ಅಂದುಕೊಳ್ಳುವ ಬದಲು ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಮೂಲಕ ಶಾಶ್ವತ ಪರಿಹಾರ ಸಿಗುವಂತೆ ಮಾಡಿದರೆ 'ಉದರ ನಿಮಿತ್ತಂ ಬಹುಕೃತ ವೇಷಂ' ತಪ್ಪುತ್ತದೆ. ನೀವೇನಂತಿರೀ?
Advertisement