ಕೆಜಿಎಫ್: ತವರು ಮನೆಯಿಂದ ವರದಕ್ಷಿಣೆ ತರುವಂತೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ ಪತಿ ಹಾಗೂ ಅತ್ತೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಗೃಹಿಣಿಯೊಬ್ಬಳು ದೂರು ನೀಡಿರುವ ಘಟನೆ ಚಾಂಪಿಯನ್ರೀಫ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಾಂಪಿಯನ್ರೀಫ್ ನಿವಾಸಿ ಲಾವಣ್ಯ ಎಂಬುವರೊಂದಿಗೆ ನಗರದ ಸುಭಾಷ್ನಗರದ ನಿವಾಸಿ ಪ್ರಭು ಎಂಬುವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ಸಮಯದಲ್ಲಿ 160 ಗ್ರಾಂ ಚಿನ್ನಾಭರಣ, ದ್ವಿಚಕ್ರ ವಾಹನ ಸೇರಿದಂತೆ ಗೃಹೋಪಯೋಗಿ ವಸ್ತುಗಳನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಮದುವೆಯಾದ ಹೊಸತರಲ್ಲಿ ಅನ್ಯೋನ್ಯವಾಗಿದ್ದದ ದಂಪತಿಗಳು ನಂತರದ ದಿನಗಳಲ್ಲಿ ವರದಕ್ಷಿಣಿ ವಿಚಾರವಾಗಿ ಕಿರುಕುಳ ಆರಂಭವಾಯಿತು. ಪತಿ ಪ್ರಭು ಹಾಗೂ ಅತ್ತೆ ತಿಲಗಾ, ನನ್ನನ್ನು ತವರಿನಿಂದ ವರದಕ್ಷಿಣೆ ತರುವಂತೆ ಪೀಡಿಸಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು. ಮಗಳಿಗೆ ಅನಾರೋಗ್ಯದ ಬಗ್ಗೆ ಗಂಡನಿಗೆ ತಿಳಿಸಿದರೂ, ಚಿಕಿತ್ಸೆ ಕೊಡಿಸದೆ ನಿರ್ಲಕ್ಷ್ಯ ಎಸಗಿದ್ದಾರೆ ಎಂದು ತಿಳಿಸಿದ್ದಾರೆ. ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿಕೊಂಡಿರುವು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಶಿಕ್ಷಣದಲ್ಲಿ ಮಾನವೀಯ ಮೌಲ್ಯ ಅಗತ್ಯ
ಚಿಕ್ಕಬಳ್ಳಾಪುರ: ಕೇವಲ ಪಠ್ಯ ಪುಸ್ತಕ ಬೋಧನೆ ಸಾಕಾಗುವುದಿಲ್ಲ. ಮಾನವೀಯ ಮೌಲ್ಯಗಳು ರೂಪಿಸುವ ಶಿಕ್ಷಣ ಮಕ್ಕಳಿಗೆ ನೀಡಬೇಕು ಎಂದು ಸಮಾಜ ಸೇವಕ ಜಿ.ಕೆ.ಸಿ. ರೆಡ್ಡಿ ಹೇಳಿದರು.
ತಾಲೂಕಿನ ಪೋಶೆಟ್ಟಹಳ್ಳಿಯ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಏರ್ಪಡಿಸಿದ್ದ ಕಂಪ್ಯೂಟರ್ ಕೊಠಡಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ಸನಾತನ ಪರಂಪರೆ ಮರೆಯುತ್ತಿದ್ದು ಮಾನವೀಯ ಮೌಲ್ಯಗಳನ್ನು ಪುನರುಜ್ಜೀವನಗೊಳಿಸಬೇಕಾಗಿದೆ ಎಂದರು.
ಬೆಂಗಳೂರಿನ ಪ್ರತಿಷ್ಟಿತ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಟೆಕ್ನಾಲಜಿ ನಿರ್ದೇಶಕ ಅನಿಲ್ ರಾವತ್ ಮಾತನಾಡಿ, ಪ್ರತಿ ಕ್ಷೇತ್ರದಲ್ಲೂ ಕಂಪ್ಯೂಟರ್ ಮಹತ್ವ ಹೆಚ್ಚಿಸಿಕೊಂಡಿದೆ. ಇದರಿಂದ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಅತ್ಯಗತ್ಯವಾಗಿ ಬೇಕೆಂದರು. ಜಿ.ಕೆ.ಸಿ. ರೆಡ್ಡಿ ಮತ್ತು ರಾವತ್ ಶಿಕ್ಷಣ ತಮ್ಮ ಫೌಂಡೇಷನ್ನಿಂದ ಶಾಲೆಗೆ ಸುಮಾರು 2 ಲಕ್ಷ ಮೌಲ್ಯದ ಕಂಪ್ಯೂಟರ್ ಯಂತ್ರಗಳು ಹಾಗೂ ಪೀಠೋಪಕರಣಗಳನ್ನು ನೀಡಿದರು.
ಜಿಲ್ಲಾ ನಾಗರಿಕ ಹೋರಾಟ ಸಮಿತಿಯ ಆನಂದತೀರ್ಥರಾವ್, ಸದಾಶಿವ ಮಾತನಾಡಿದರು. ಶಿಕ್ಷ ಸಂಸ್ಥೆಯ ಸಿ.ಎಂ. ನಾರಾಯಣಸ್ವಾಮಿ, ಚಂದ್ರು, ಕೆಂಪಣ್ಣ, ರಾಮಾಂಜಿನಪ್ಪ, ಮಮತ, ವೀಣಾ, ಭಾರತಿ, ನಳಿನ ಇದ್ದರು.
ಹಾಲು ಉತ್ಪಾದಕರ ಸಂಘದ ವಾರ್ಷಿಕ ಸಭೆ
ಗುಡಿಬಂಡೆ: ತಾಲೂಕಿನ ಬ್ರಾಹ್ಮರಣ ಹಳ್ಳಿ ಗ್ರಾಮದಲ್ಲಿನ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ 2013-14ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷೆ ಸಾಕಮ್ಮ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು. ಮುಖ್ಯ ಅತಿಥಿಯಾಗಿದ್ದ ಕೋಚಿಮುಲ್ ನಿರ್ದೇಶಕ ಅಶ್ವತ್ಥ ರೆಡ್ಡಿ, ಉತ್ಪಾದಕರು ಗುಣಮಟ್ಟದ ಹಾಲನ್ನು ಸರಬರಾಜು ಮಾಡುವ ಮೂಲಕ ಸಂಘದ ಒಳಿತಿಗೆ ಶ್ರಮಿಸಬೇಕೆಂದರು.
ಉಪ ವ್ಯವಸ್ಥಾಪಕರಾದ ರಾಮಚಂದ್ರಪ್ಪ ಹಾಗೂ ನಾರಾಯಣ ಸ್ವಾಮಿ ಸಂಘದ ಸದಸ್ಯರಿಗೆ ಸಿಗುವ ಸೌಲಭ್ಯಗಳ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಕೋಚಿಮುಲ್ ನಿರ್ದೇಶಕಿ ಸುನಂದಮ್ಮ, ಬ್ಯಾಂಕ್ ವ್ಯವಸ್ಥಾಪಕ ರಮೇಶ್ ಬಾಬು, ವಿಸ್ತರಣಾಧಿಕಾರಿ ಸದಾಶಿವ, ಶುಭಾ, ಹಾಲು ಪರೀಕ್ಷಕಿ ಭೈರಮ್ಮ ಮತ್ತಿತರರು ಇದ್ದರು.
ವಿಫಲ ಕೊಳವೆ ಬಾವಿ ಮುಚ್ಚಿದ ಗ್ರಾಪಂ
ಟೇಕಲ್: ವಿಫಲ ಕೊಳವೆ ಬಾವಿಗಳು ಮೃತ್ಯುಕೂಪಗಳಾಗಿದ್ದು, ಕೆಜಿ ಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿರುವ 37 ಸರ್ಕಾರಿ ಕೊಳವೆ ಬಾವಿಗಳನ್ನು ಮುಚ್ಚಲಾಗಿದೆ.
ಈ ಹಿಂದೆ ಅಕ್ಷತಾ ಸಾವಿನ ಪ್ರಕರಣ ನಡೆದಾಗ ಎಚ್ಚೆತ್ತ ಪಂಚಾಯಿತಿ ಈ ಕೆಲಸ ಪೂರೈಸುವಲ್ಲಿ ಯಶಸ್ವಿಯಾಗಿದೆ ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಗೋವಿಂದೆಗೌಡ ತಿಳಿಸಿದರು. ಈ ಸಂದರ್ಭದಲ್ಲಿ ಟೇಕಲ್ ನಾಡಕಚೇರಿ ಸಮೀಪವಿದ್ದ ವಿಫಲ ಕೊಳವೆ ಬಾವಿಯನ್ನು ಮುಚ್ಚಲಾಯಿತು. ಮಂಜುನಾಥ್, ದೇವರಾಜ್, ಬೈಚಪ್ಪ, ಜಲಗಾರ ವೆಂಕಟೇಶ್ ಇದ್ದರು.