ಶಾಸಕರಿಂದ ಜನರಿಗೆ ತಪ್ಪು ಸಂದೇಶ

Updated on: 

ಬಂಗಾರಪೇಟೆ: ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರು ಇತ್ತೀಚೆಗೆ ತಮ್ಮ ಒಂದು ವರ್ಷದ ಸಾಧನೆ ಬಿಂಬಿಸುವ ಪುಸ್ತಕ ಹೊರ ತಂದಿರುವುದರಲ್ಲಿ ಶೇ. 70ರಷ್ಟು ಬಿಜೆಪಿ ಸರ್ಕಾರದ ಕಾಮಗಾರಿಗಳನ್ನು ತಮ್ಮ ಸಾಧನೆ ಎಂದು ಬಿಂಬಿಸುವ ಮೂಲಕ ಜನರಲ್ಲಿ ತಪ್ಪು ಸಂದೇಶ ರವಾನಿಸಿದ್ದಾರೆಂದು ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಶಾಸಕರ ಸಾಧನೆ ಜನರಿಗೆ ಪರಿಚಯಿಸುವುದು ತಪ್ಪಲ್ಲ. ಆದರೆ ಹಿಂದಿನ ಸರ್ಕಾರದಲ್ಲಿ ಮಂಜೂರಾಗಿದ್ದ ಕಾಮಗಾರಿಗಳನ್ನು ತಮ್ಮ ಸಾಧನೆ ಎಂದು ಹೇಳಿಕೊಳ್ಳುವುದರಲ್ಲಿ ಅರ್ಥವಿಲ್ಲ,ಪಿಎಂಜೆಎಸ್ವೈ ಯೋಜನೆಯಲ್ಲಿ ಕಾಂಗ್ರೆಸ್ ಸರ್ಕಾರ ಒಂದು ರು. ಸಹ ಮಂಜೂರು ಮಾಡಿಸಿಲ್ಲ, ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ ಜಿಪಂ ಯೋಜನೆಯಾಗಿದೆ. ನಗರೋತ್ಥಾನ ಯೋಜನೆಯಲ್ಲಿ 8 ಕೋಟಿ ಬಿಜೆಪಿ ಸರ್ಕಾರ ಮಂಜೂರು ಮಾಡಿದ್ದ ಹಣ ಹಾಲಿ ಸರ್ಕಾರ ಯಾವುದೇ ಹಣ ಬಿಡುಗಡೆ ಮಾಡಲಿಲ್ಲ. ಇನ್ನು ರಸ್ತೆಗಳ ವಿಷಯದಲ್ಲೂ ಕಾಂಗ್ರೆಸ್ ಸರ್ಕಾರದ ಪಾತ್ರ ಏನೂ ಇಲ್ಲ, ವಾಸ್ತವ ಸ್ಥಿತಿ ಹೀಗಿದ್ದರೂ ಹಾಲಿ ಶಾಸಕರು ಬಿಜೆಪಿ ಸರ್ಕಾರದಲ್ಲಿ ಮಂಜೂರಾಗಿದ್ದ ಕಾಮಗಾರಿಗಳಿಗೆ ಮರು ಪೂಜೆ ಸಲ್ಲಿಸಿ ಮತದಾರರಿಗೆ ತಪ್ಪು ಭಾವನೆ ಬರುವಂತೆ ಮಾಡಿದ್ದಾರೆ. ಕ್ಷೇತ್ರದಲ್ಲಿ ಮೊದಲಿನಿಂದಲೂ ಯಾವ ಶಾಸಕರೂ ಜಿದ್ದಿನ ರಾಜಕಾರಣ ಮಾಡಿಲ್ಲ. ಇದು ಆರೋಗ್ಯ ಬೆಳವಣಿಗೆಯಾಗಿದೆ. ಹಾಲಿ ಶಾಸಕರು ಜಿದ್ದಿನ ರಾಜಕಾರಣ ಮಾಡದೆ ಜನಪರ ಆಡಳಿತಕ್ಕೆ ಒತ್ತು ಕೊಡುತ್ತಿದ್ದಾರೆ. ಇದು ಶ್ಲಾಘನೆಯ. ಆದರೆ ಅಂಕಿ ಅಂಶಗಳನ್ನು ಹೇಳುವಾಗ ಸತ್ಯಾಂಶವನ್ನು ಜನರ ಮುಂದೆ ಹೇಳಬೇಕೆ ವಿನಃ  ಪ್ರಚಾರಕ್ಕಾಗಿ ಸುಳ್ಳು ಮಾಹಿತಿ ನೀಡಬಾರದು, ಎಸ್.ಎನ್. ರೆಸಾರ್ಟ್ನಿಂದ ದೇಶಿಹಳ್ಳಿವರೆಗೂ ಡಬಲ್ ರಸ್ತೆ ಕಾಮಗಾರಿಗೆ ನನ್ನ ಅವಧಿಯಲ್ಲೇ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಶಾಸಕರು 6 ತಿಂಗಳಲ್ಲಿ ಡಬಲ್ ರಸ್ತೆ ಮಾಡುವುದಾಗಿ ಹೇಳಿ ವರ್ಷವಾದರೂ ಬಜೆಟ್ನಲ್ಲಿ ಹಣ ಮೀಸಲಿಟ್ಟಿಲ್ಲ ಎಂದು ನೇರವಾಗಿ ಆರೋಪಿಸಿ, ಶಾಸಕರು ಹೊರ ತಂದಿರುವ ಸಾಧನೆ ಪುಸ್ತಕದಲ್ಲಿ ಸುಳ್ಳು ಮಾಹಿತಿ ಇದೆ. ಈ ಬಗ್ಗೆ ಬಹಿರಂಗ ಚರ್ಚೆಗೆ ಶಾಸಕರಿಗೆ ಮಾಜಿ ಶಾಸಕರು ಪಂಥಾಹ್ವಾನ ನೀಡಿದರು. ಪಕ್ಷದ ಅಧ್ಯಕ್ಷ ಮಾರ್ಕಂಡೇಗೌಡ, ರಮೇಶ್, ನಾಗಪ್ರಕಾಶ್, ಪ್ರಭಾಕರ್, ನಾರಾಯಣಸ್ವಾಮಿ ಮತ್ತಿತರರು ಇದ್ದರು.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com