ಕೆಜಿಎಫ್: ಬಿಜಿಎಂಎಲ್ ಚಿನ್ನದ ಗಣಿಯನ್ನು ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಗಣಿಯನ್ನು ಜಾಗತಿಕ ಟೆಂಡರ್ ಮೂಲಕ ಪುನಾರಂಭಿಸಲು ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕೇಂದ್ರ ಗಣಿಖಾತೆ ಸಚಿವ ನರೇಂದ್ರಸಿಂಗ್ ತೂಮರ್ ಹೇಳಿದರು.
ಸಂಸತ್ ಸದಸ್ಯರಾದ ಸುರೇಶ್ಅಂಗಡಿ ಹಾಗೂ ಪಿ.ಸಿ. ಮೋಹನ್ ಸಮ್ಮುಖದಲ್ಲಿ ಮಾಜಿ ಶಾಸಕ ಹಾಗೂ ಚಿನ್ನದ ಗಣಿ ಕಾರ್ಮಿಕ ಒಕ್ಕೂಟ ಸಂಘಗಳ ಕಾರ್ಯಾಧ್ಯಕ್ಷ ವೈ. ಸಂಪಂಗಿ ನೇತೃತ್ವದಲ್ಲಿ ಕಾರ್ಮಿಕರ ನಿಯೋಗ ನವದೆಹಲಿಯಲ್ಲಿ ಮಂಗಳವಾರ ಗಣಿಖಾತೆ ಸಚಿವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಮಾತನಾಡಿದರು. ಬಿಜಿಎಂಎಲ್ ಚಿನ್ನದ ಗಣಿ ಲಾಭದಾಯಕವಾಗಿ ನಡೆಸಬೇಕು ಎನ್ನುವುದು ಕೇಂದ್ರ ಸರ್ಕಾರದ ಪ್ರಮುಖ ಉದ್ದೇಶವಾಗಿದ್ದು, ಈ ವಿಷಯಕ್ಕೆ ಸಂಬಂಧಿಸಿ ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರವೂ ಸಹ ಆಸಕ್ತಿ ತೋರಿದೆ. ಸದ್ಯದಲ್ಲೇ ಹಿರಿಯ ಅಧಿಕಾರಿಗಳ ಸಭೆಯನ್ನು ಕರೆದು ಚಿನ್ನದ ಗಣಿ ಸಮಸ್ಯೆ ಬಗಹರಿಸಲು ಚರ್ಚಿಸುವುದಾಗಿ ತಿಳಿಸಿದರು.
ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಮುನಿಸ್ವಾಮಿರೆಡ್ಡಿ, ಎಪಿಎಂಸಿ ಮಜಿ ಅಧ್ಯಕ್ಷ ಎನ್.ಆರ್. ವಿಜಯಶಂಕರ್, ಮುಖಂಡರಾದ ರಘುಪತಿ, ಸತೀಶ್, ಅಮರೇಂದ್ರಮೌನಿ, ಕಾರ್ಮಿಕ ಸಂಘದ ಮುಖಂಡರಾದ ಲೂಯಿಸ್, ಪುರುಷೋತ್ತಮ, ಡಿ. ಮನವಾಳನ್, ವಿನ್ಸಂಟ್ ಜಯಕುಮಾರ್, ಡಿ. ವೆಂದನ್, ರಾಘವಲು ಮತ್ತಿತರರು ಹಾಜರಿದ್ದರು.
Advertisement