ಮಾಲೂರು: ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರ 63ನೇ ಹುಟ್ಟುಹಬ್ಬದ ಅಂಗವಾಗಿ ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಶಾಸಕ ಎ. ನಾಗರಾಜ್ ನೇತೃತ್ವದಲ್ಲಿ ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಬುಧವಾರ ಹಣ್ಣು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಎ.ನಾಗರಾಜ್, ಡಾ.ಜಿ. ಪರಮೇಶ್ವರ್ ಅವರು ತಮ್ಮ ಆಡಳಿತದಲ್ಲಿ ಸಾಮಾಜಿಕ ನ್ಯಾಯ ಪರಿಪಾಲಕರು.ಅವರು ಈ ಹಿಂದೆ ಉನ್ನತ್ತ ಶಿಕ್ಷಣ, ಜವಳಿ, ವಿಜ್ಞಾನ-ತಂತ್ರಜ್ಞಾನ ಮತ್ತಿತರ ಖಾತೆಗಳ ಸಚಿವರಾಗಿ ಯಶ್ವಸಿಯಾಗಿ ನಿಭಾಯಿಸಿದ್ದು, ಅವರನ್ನು ಉಪಮುಖ್ಯಮಂತ್ರಿ ಮಾಡಬೇಕು ಎಂದರು. ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಆಶೋಕ್ ಕುಮಾರ್, ಜಮೀರ್ ಪಾಷ, ಸಾದಿಕ್, ಡಿ.ಟಿ. ಮಂಜುನಾಥ್, ಆರಾಧನಾ ವೇಣು, ಸಂಪಂಗಿ, ಹರಿ ಇದ್ದರು.
Advertisement