ಕೋಲಾರ: ತೆರೆದ ಕೊಳವೆ ಬಾವಿಗಳಿಂದ ಆಗುತ್ತಿರುವ ಅನಾಹುತ ಅರಿತ ಗ್ರಾಮಸ್ಥರು ವಿಫಲ ಕೊಳವೆ ಬಾವಿಗಳನ್ನು ಮುಚ್ಚಲು ಆಂದೋಲನ ಕೈಗೊಂಡಿದ್ದಾರೆ.
ಕೋಲಾರ ತಾಲೂಕಿನ ತೊಟ್ಲಿ ಗ್ರಾಮದಲ್ಲಿ ಬುಧವಾರ ಶಾಲಾ ವಿದ್ಯಾರ್ಥಿಗಳು, ಗ್ರಾಪಂ ಆಡಳಿತ ಮತ್ತು ಗ್ರಾಮಸ್ಥರು ಸಂಯುಕ್ತವಾಗಿ ಜನ ಜಾಗೃತಿ ಜಾಥಾ ನಡೆಸಿ ತೆರೆದಿದ್ದ ಖಾಸಗಿ ಮತ್ತು ಸರ್ಕಾರಿ ಕೊಳವೆ ಬಾವಿಗಳನ್ನು ಮುಚ್ಚುವ ಮೂಲಕ ಜಿಲ್ಲಾ ಆಡಳಿತ ಮತ್ತು ಜಿಪಂ ಮನವಿಗೆ ಸ್ಪಂದಿಸಿದ್ದಾರೆ.
ತೊಟ್ಲಿ ಗ್ರಾಪಂ ಕಚೇರಿ ಮುಂದೆ ಪಿಡಿಒ ಸಿ.ಎಸ್. ಶ್ರೀನಾಥ್ ಗೌಡ ಜಾಥಾಗೆ ಹಸಿರು ಬಾವುಟ ತೋರಿ ಚಾಲನೆ ನೀಡಿದರು. ಗ್ರಾಮದಲ್ಲಿ ಸರ್ಕಾರಿ ಬೋರ್ವೆಲ್ಗಳನ್ನು ಮುಚ್ಚುವ ಕಾರ್ಯ ಕೊನೆ ಹಂತದಲ್ಲಿದೆ. ಗ್ರಾಪಂ ವ್ಯಾಪ್ತಿಯ 32 ತೆರೆದ ಕೊಳವೆ ಬಾವಿಗಳನ್ನು ಮುಚ್ಚಲಾಗಿದ್ದು, ಬಾಕಿ ಇರುವ 8 ಬೋರ್ವೆಲ್ಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ಗ್ರಾಮದ ಶಾಂತಿನಿಕೇತನ ಪ್ರೌಢಶಾಲೆ ಮುಖ್ಯೋಪಾದ್ಯಾಯ ಸಿ. ರಮೇಶ್ ಗೌಡ, ಮುಖ್ಯೋಪಾದ್ಯಾಯನಿ ರತ್ನಮ್ಮ, ಗ್ರಾಮದ ಟಿ.ವಿ. ರಮೇಶ್, ಗ್ರಾಪಂ ಕಾರ್ಯದರ್ಶಿ ನಾರಾಯಣಸ್ವಾಮಿ, ಬಿಲ್ ಕಲೆಕ್ಟರ್ ನಾರಾಯಣಪ್ಪ, ಶಿಕ್ಷಕರಾದ ಸುಗುಣ, ರಾಧಮ್ಮ, ಗಾಯತ್ರಿ, ಪದ್ಮಜ, ಕೆ. ಕೃಷ್ಣ, ಚಂದ್ರಪ್ಪ ಇದ್ದರು.
Advertisement