ಟೇಕಲ್: ಕೋಲಾರ ಜಿಪಂ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರತ್ನಮ್ಮ ನಂಜೇಗೌಡ ಸ್ವಕ್ಷೇತ್ರ ಟೇಕಲ್ಗೆ ಬಂದಾಗ ಅವರನ್ನು ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು. ಕೆ.ಜಿ. ಹಳ್ಳಿಯ ವಿನಾಯಕಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಅವರು ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಟೇಕಲ್ ಮತ್ತು ಕೆ.ಜಿ. ಹಳ್ಳಿಯ ಕಾರ್ಯಕರ್ತರು ಅವರನ್ನು ಹೂವಿನ ಹಾರ ನೀಡಿ ಅಭಿನಂದಿಸಿದರು. ಕೋಮುಲ್ ನಿರ್ದೇಶಕ ಕೆ.ವೈ. ನಂಜೇಗೌಡ, ಜಿಪಂ ನೂತನ ಉಪಾಧ್ಯಕ್ಷ ಸಿಮೋಲ್ ಮೋಹನ್, ಆನೇಪುರ ಹನುಮಂತಪ್ಪ, ಬಿ.ಜಿ. ಮುನಿಶಾಮಿಗೌಡ, ಕ್ಷೇತ್ರೇನಹಳ್ಳಿ ವೆಂಕಟೇಶ್ ಇದ್ದರು.
Advertisement