ಮಾಲೂರು: ವಿದ್ಯಾಭ್ಯಾಸ ಮುಗಿಸಿ ಹೊರಹೋಗುತ್ತಿರುವ ವಿದ್ಯಾರ್ಥಿನಿಯರು ತಾವು ಹತ್ತಿ ಇಳಿದಿರುವ ಮೆಟ್ಟಲುಗಳನ್ನು ಭವಿಷ್ಯದಲ್ಲಿ ಮರೆಯಬಾರದು ಎಂದು ಸಮಾಜ ಕಲ್ಯಾಣ ಅಧಿಕಾರಿ ನರಸಿಂಹಯ್ಯ ಹೇಳಿದರು. ಇಲ್ಲಿನ ಬಾಲಕೀಯರ ಹಾಸ್ಟೆಲ್ನಲ್ಲಿ ಬುಧವಾರ ನಡೆದ ನೂತನ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸ್ವಾಗತಿಸಿ, ಹೊರ ಹೋಗುತ್ತಿರುವ ವಿದ್ಯಾರ್ಥಿಗಳನ್ನು ಬೀಳ್ಕೊಡುವ ಕಾರ್ಯಕ್ರಮದಲ್ಲಿ ಮಾತನಾಡಿ, ವಿವಿಧ ಪ್ರದೇಶಗಳಿಂದ ಇಲ್ಲಿಗೆ ಬರುವ ಎಲ್ಲ ವಿದ್ಯಾರ್ಥಿನಿಯರ ಉದ್ದೇಶ ಉತ್ತಮ ಶಿಕ್ಷಣ ಪಡೆಯುವುದು. ಶಿಸ್ತು, ಕರ್ತವ್ಯ ಕಲಿಸುವ ಹಾಸ್ಟೆಲ್ ಜೀವನ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿ ಯಾಗಲಿದೆ ಎಂದರು.
ಚುಟುಕು ಸಾಹಿತ್ಯ
ಪರಿಷತ್ ಕವಿಗೋಷ್ಠಿ
ಗೌರಿಬಿದನೂರು: ಮಂಚೇನಹಳ್ಳಿಯಲ್ಲಿ ನಡೆಯಲಿರುವ ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಕವಿಗೋಷ್ಠಿ ಏರ್ಪಡಿಸಲಾಗಿದೆ. ಕವಿಗೋಷ್ಠಿಯಲ್ಲಿ ಭಾಗವಹಿಸಿ ಕವನ ವಾಚಿಸುವ ಆಸಕ್ತ ಕವಿಗಳು ತಮ್ಮ ಹೆಸರನ್ನು ನಂದಾಯಿಸಿಕೊಳ್ಳಬೇಕೆಂದು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಹಳೇಹಳ್ಳಿ ಕಿರಣ್ ಕುಮಾರ್ ತಿಳಿಸಿದ್ದಾರೆ. ತಾಲೂಕು ಚುಟುಕು ಸಾಹಿತ್ಯ ಪಪರಿಷತ್ ಅಧ್ಯಕ್ಷೆ ಪ್ರಭಾನಾರಾಯಣಗೌಡ, ಸಾ.ನಾ. ಲಕ್ಷ್ಮಣಗೌಡರನ್ನು ಸಂಪರ್ಕಿಸಲು ಕರಲಾಗಿದೆ.
ತಂತ್ರಜ್ಞಾನ ಯುಗದಲ್ಲಿ ಕಂಪ್ಯೂಟರ್ ಶಿಕ್ಷಣ ಅಗತ್ಯ
ಗೌರಿಬಿದನೂರು: ತಾಲೂಕಿನ ಮಂಚೇನಹಳ್ಳಿ ಹೋಬಳಿ ಸಮೀಪದ ಪೋಶೆಟ್ಟಹಳ್ಳಿ ವಿವೇಕಾನಂದ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಕಂಪ್ಯೂಟರ್ ಕೊಠಡಿ ಉದ್ಘಾಟನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಮಾಜ ಸೇವಕ ಜಿ.ಕೆ.ಸಿ. ರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಧುನಿಕ ತಂತ್ರಜ್ಞಾನ ಯುಗದಲ್ಲಿ ಕಂಪ್ಯೂಟರ್ ಶಿಕ್ಷಣ ಅತ್ಯಗತ್ಯ ಎಂದರು. ಶಿಕ್ಷಣದ ಮೂಲಕ ಮಕ್ಕಳಲ್ಲಿ ಸಮಾಜಿಕ ಮೌಲ್ಯ ಅಳವಡಿಸಲು ಸಾಧ್ಯ, ಸಮಾಜದ ಜ್ವಲಂತ ಸಮಸ್ಯಗಳ ಬಗ್ಗೆ ಅರಿವುಮೂಡಿಸಬೇಕೆಂದು ಅವರು ತಿಳಿಸಿದರು. ಐಬಿಎಂಟಿ ಮ್ಯಾನೇಜ್ಮೆಂಟ್ ಟೆಕ್ನಾಲಜಿ ಕಾಲೇಜಿನ ನಿರ್ದೇಶಕ ಅನಿಲ್ ರಾವತ್ ಮಾತನಾಡಿ, ವಿದ್ಯಾದಾನ ಮಹಾದಾನ. ಗ್ರಾಮೀಣ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರತಿಯೊಬ್ಬರು ಆದ್ಯತೆ ನೀಡಬೇಕು. ಶಿಕ್ಷಣ ವ್ಯಕ್ತಿಯ ಬದುಕನ್ನು ರೂಪಿಸುತ್ತದೆ, ಗ್ರಾಮೀಣ ಮಕ್ಕಳು ನಗರ ಪ್ರದೇಶದ ಮಕ್ಕಳೊಂದಿಗೆ ಸ್ಪರ್ಧಿಸಲು ಆಧುನಿಕ ತಂತ್ರಜ್ಞಾನ ಶಿಕ್ಷಣ ಒದಗಿಸಬೇಕು ಎಂದರು. ಹಳೇ ವಿದ್ಯಾರ್ಥಿ ಸಂಘದಿಂದ ನಿವೃತ್ತ ಶಿಕ್ಷಕ ವಿ.ಜಿ.ನಂದೀಶ್ವರಯ್ಯಗೆ ಸನ್ಮಾನಿಸಿದರು. ಆನಂದತೀರ್ಥರಾವ್, ಸಿ.ಎಂ. ನಾರಾಯಣಸ್ವಾಮಿ, ಮುಖ್ಯೋಪಾಧ್ಯಯ ಶ್ರೀನಿವಾಸ್, ಸದಾಶಿವ, ತಾರಾನಾಥ್, ಚಂದ್ರಶೇಖರ್, ನಾಗಭೂಷಣ್, ರಾಮಾಂಜಿನಪ್ಪ, ನಾರಾಯಣಸ್ವಾಮಿ, ಬಿಸ್ಲಹಳ್ಳಿ ಕೆಂಪಣ್ಣ ಇದ್ದರು.
Advertisement