ಕಾರ್ಯಕರ್ತರ ಪ್ರತಿಭಟನೆ

Updated on: 

ಕೋಲಾರ: ರಾಜ್ಯದಲ್ಲಿ ಹೆಣ್ಣುಮಕ್ಕಳ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಯುತ್ತಿದ್ದು, ಅದನ್ನು ತಡೆಗಟ್ಟಲು ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿ ಪ್ರಜಾಸೇವಾ ಸಮಿತಿ ಸಂಯೋಜಿತ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಕ್ಷೇಮಾಭಿವೃದ್ಧಿ ಸಮಿತಿ, ಆರೋಗ್ಯ ಆಶಾ ಕಾರ್ಯಕರ್ತ ಕ್ಷೇಮಾಭಿವೃದ್ಧಿ ಸಮಿತಿ, ಅಕ್ಷರ ದಾಸೋಹ ನೌಕರರ ಕ್ಷೇಮಾಭಿವೃದ್ಧಿ ಸಮಿತಿ ವತಿಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ಹಮ್ಮಿಕೊಂಡು ನಂತರ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಮುಖಂಡರಾದ ಕಲ್ವಮಂಜಲಿ ಸಿ.ಶಿವಣ್ಣ, ನರಸಾಪುರ ಎಸ್.ನಾರಾಯಣಸ್ವಾಮಿ, ಎಸ್.ಆರ್. ಲಕ್ಷ್ಮಮ್ಮ, ವಿ.ಮಿನಾಕ್ಷಿ, ನಾಗವೇಣಮ್ಮ, ಶಾಂತಮ್ಮ, ವಿ.ಜಮುನಾರಾಣಿ, ವಿ.ನಿರ್ಮಲಾಬಾಯಿ, ವಿ.ಕೆ.ರಮಾಮಣಿ, ಗಾಯತ್ರಿ, ಪಾರ್ವತಮ್ಮ, ಚೌಡಮ್ಮ, ಗೀತಾ, ಎಂ.ವಿಜಯಕುಮಾರಿ, ಕಲ್ವಮಂಜಲಿ ಕೆ.ಎಸ್.ರಾಮಾನುಜಂ ಪ್ರತಿಭಟನೆಯಲ್ಲಿದ್ದರು.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com