ಕುಷ್ಟಗಿ: ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಜಿಲ್ಲೆಯ ಮುರಡಿ ಭೀಮಜ್ಜ ಅವರ ಹೆಸರಲ್ಲಿ ವೃತ್ತ ನಿರ್ಮಿಸಲು ಒತ್ತಾಯಿಸಿ ಸ್ಥಳೀಯ ಸಾರ್ವಜನಿಕರು ಗುರುವಾರ ಪುರಸಭೆ ಅಧಿಕಾರಿಗೆ ಮನವಿ ಸಲ್ಲಿಸಿದರು. ಮಾಜಿ ಶಾಸಕ ಅಮರೇಗೌಡ ಪಾಟೀಲ ಭಯ್ಯಾಪುರ ಅವರ ಮನೆಗೆ ಸಂಪರ್ಕ ಕಲ್ಪಿಸುವ ಬಸವ ನಗರದ ಪ್ರಮುಖ ರಸ್ತೆಯಲ್ಲಿ ಮುರಡಿ ಭೀಮಜ್ಜ ವೃತ್ತ ನಿರ್ಮಿಸಬೇಕು ಎಂದು ವೀರೇಶ ಬಂಗಾರಶೆಟ್ಟರ್, ಸುಭಾನಿಸಾಬ್ ಗೋನಾಳ, ದ್ಯಾಮಣ್ಣ ಡೊಳ್ಳಿನ, ಅಮರಚಂದ ಜೈನ್, ಫಕ್ಕೀರಪ್ಪ ಹೊಸವಕ್ಕಲ, ಸಂತೋಷ್ ಸರಗಣಾಚಾರ, ಸೈಯದ್ ಜಿಲಾನ್‌ಮುಲ್ಲಾ, ಬಾಬು ದಾವಣಗೆರೆ ಸೇರಿದಂತೆ ಇತರರು ಪುರಸಭೆಯ ನೈರಮಲ್ಯಧಿಕಾರಿ ಹಂಪಯ್ಯಗೆ ಮನವಿಪತ್ರ ಸಲ್ಲಿಸಿದರು. ಈ ವೇಳೆ ಪುರಸಭೆ ಅಧಿಕಾರಿ ರೇವಣಸಿದ್ದಪ್ಪ ಇತರರು ಇದ್ದರು.
Advertisement