ಹಲಗೂರು: ನಾಡ ಹಬ್ಬಗಳು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಅವಿಬಾಜ್ಯ ಅಂಗ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಹಲಗೂರು ಹೋಬಳಿ ಘಟಕದ ಅಧ್ಯಕ್ಷ ಎಚ್. ಶಿವರಾಮು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದನಗೂರು ಮಠ ಮತ್ತು ಗವಿಮಠದ ಹೆಸರು ಕೇಳಿದ ತಕ್ಷಣ ಕವಿ ಷಡಕ್ಷರ ನೆನಪಾಗುತ್ತಾರೆ. ಅವರು ಸಾಹಿತ್ಯ ಕೃಷಿ ಮಾಡಿ ಈ ನೆಲವನ್ನು ಪವಿತ್ರಗೊಳಿಸಿದ್ದರೆ ಎಂದರು.
ಕಾರ್ಯಕ್ರಮವನ್ನು ಭಾರತೀನಗರದ ಸರ್ಕಲ್ ಇನ್ಸ್‌ಪೆಕ್ಟರ್ ಎಸ್.ಇ. ಗಂಗಾಧರಸ್ವಾಮಿ ಉದ್ಘಾಟಿಸಿದರು. ತೋಟಹಳ್ಳಿ ಮಠದ ಬಸವ ಪ್ರಭುಸ್ವಾಮೀಜಿ, ಬಾಣಸವಾಡಿ ನಾಗಣ್ಣ, ಎಚ್.ಆರ್. ಅಶೋಕ್ ಕುಮಾರ್ ಮಾತನಾಡಿ, ಮಠದ ಐತಿಹಾಸಿಕ ಹಿನ್ನಲೆಯಿದ್ದರೂ ಬೆಳಕಿಗೆ ಬಂದಿರಲಿಲ್ಲ ಹಾಗೂ ಬರುವ ಭಕ್ತರಿಗೆ ಸೌಲಭ್ಯಗಳು ಸಮರ್ಪಕವಾಗಿರಲಿಲ್ಲ.
ಆದರೆ ಪ್ರಸ್ತುತ ಬರುವ ಭಕ್ತರಿಗೆ ಸೌಲಭ್ಯದ ಜೊತೆಗೆ ಐತಿಹಾಸಿಕ ಕ್ಷೇತ್ರವಾಗಿಯೂ ಗಮನ ಸೆಳೆಯುತ್ತಿದೆ ಎಂದರು.
ಗವಿಮಠದ ಷಡಕ್ಷರಿ ಸ್ವಾಮೀಜಿ, ಡಾ. ವೆಂಕಟೇಶ್, ನಾಗೇಂದ್ರ, ಡಿ. ರಾಮು, ಬಸವಣ್ಣ, ಮಹದೇವಸ್ವಾಮಿ, ಕುಂದೂರು ಮೂರ್ತಿ, ಶಿವಸ್ವಾಮಿ, ನಟರಾಜಮೂರ್ತಿ, ಶಿವರಾಂ ಇದ್ದರು. ನಂತರ ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಿತು.
Advertisement