ಮಳವಳ್ಳಿ: ಕೊಳವೆಬಾವಿಗಳ ಸ್ಥಿತಿಗತಿಗಳ ಬಗ್ಗೆ ನಿಗಾವಹಿಸುವಂತೆ ತಾಲೂಕು ಪಂಚಾಯತಿ ಅಧ್ಯಕ್ಷ ಚಿಕ್ಕಲಿಂಗಯ್ಯ ಅಧಿಕಾರಿಗಳಿಗೆ ಸೂಚಿಸಿದರು.
ಮಂಗಳವಾರ ಪಟ್ಟಣದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಕೊಳವೆ ಬಾವಿಗಳು ವಿಫಲವಾದಾಗ ಅದನ್ನು ಹಾಗೆಯೇ ಬಿಟ್ಟು ಅನೇಕ ಅನಾಹುತಗಳು ನಡೆಯುತ್ತಿವೆ. ಇದರಿಂದ ಮಕ್ಕಳ ಜೀವ ಹೋಗುತ್ತಿವೆ. ತಪಾಸಣೆ ಮಾಡಬೇಕು ಎಂದರು. ಅಲ್ಲದೆ ಕೊಳವೆ ಬಾವಿಗಳು ತೆಗೆದು ನೀರು ಬರದೆ ವಿಫಲವಾಗಿದ್ದರೆ ಅವುಗಳನ್ನು ಮುಚ್ಚಿಸುವಂತೆ ಕ್ರಮ ಕೈಗೊಳ್ಳಬೇಕು ಎಂದರು. ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿದ ತಾಲೂಕು ಪಂಚಾಯತ್ ಕಾರ್ಯರ್ವಾಹಣಾಧಿಕಾರಿ ವೆಂಕಟೇಶ್, ಪಿಡಿಒಗಳಿಗೆ ಈಗಾಗಲೆ ಈ ಬಗ್ಗೆ ತಮ್ಮ ತಮ್ಮ ಗ್ರಾ.ಪಂ.ವ್ಯಾಪ್ತಿಯಲ್ಲಿ ಕೊಳವೆ ಬಾವಿಗಳ ಬಗ್ಗೆ ಸೂಕ್ತ ಮಾಹಿತಿ ಪಡೆದು ಸೂಕ್ತ ಕ್ರಮಕ್ಕೆ ಮುಂದಾಗುವಂತೆ ಸೂಚಿಸಿದ್ದೇವೆ ಎಂದರು. ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷ ಚಿಕ್ಕಲಿಂಗಣ್ಣ, ಉಪಾಧ್ಯಕ್ಷೆ ರಾಜಮ್ಮಣಿ, ತಾಲೂಕು ಪಂಚಾಯತ್ ಕಾರ್ಯರ್ವಾಹಣಾಧಿಕಾರಿ ವೆಂಕಟೇಶ್ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು
Advertisement