ಮಂಡ್ಯ: ಕಾವೇರಿ ಮಾತೆಗೆ ಬಾಗೀನ ಅರ್ಪಿಸುವ ಶುಭ ಕಾರ್ಯಕ್ರಮಕ್ಕೆ ಪತ್ನಿ ಪಾರ್ವತಿ ಅವರ ಸಮೇತರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಿನ ಅರ್ಪಿಸಬಹುದು ಎಂಬ ನಿರೀಕ್ಷೆ ಈ ಬಾರಿಯೂ ಹುಸಿಯಾಯಿತು. ಮುಖ್ಯಮಂತ್ರಿಗಳಾಗಿ ಎರಡನೇ ಬಾರಿಗೆ ಬಾಗಿನ ಅರ್ಪಿಸುತ್ತಿರುವ ಸಿದ್ದರಾಮಯ್ಯ ಅವರು ಪತ್ನಿಯನ್ನು ಕರೆ ತರದೆ ಸಚಿವರು ಮತ್ತು ಶಾಸಕರೊಂದಿಗೆ ಸೇರಿ ಬಾಗಿನ ಸಮರ್ಪಿಸಿದರು. ಸಚಿವರೂ ಕೂಡ ತಮ್ಮ ಪತ್ನಿಯರನ್ನು ಕರೆದುಕೊಂಡು ಬಂದಿರಲಿಲ್ಲ.
Advertisement