ಮೈಸೂರು: ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ನಾಯಕ ಜನಾಂಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ನಾಯಕರ ವಿದ್ಯಾಭಿವೃದ್ಧಿ ಸಂಘವು ಅರ್ಜಿ ಆಹ್ವಾನಿಸಿದೆ. 2012ನೇ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಶೇ.70 ಕ್ಕಿಂತ ಅಧಿಕ ಅಂಕ, ಬಿ.ಎ, ಬಿ.ಎಸ್ಸಿ ಮತ್ತು ಬಿ.ಕಾಂ ಪದವಿಗಳಲ್ಲಿ ಶೇ.60ಕ್ಕೂ ಹೆಚ್ಚಿನ ಅಂಕ ಗಳಿಸಿದವರು ತಮ್ಮ ಅಂಕಪಟ್ಟಿ ಹಾಗೂ ಜಾತಿಯ ದೃಢೀಕರಣ ಪತ್ರದೊಂದಿಗೆ ಜ.31 ರೊಳಗೆ ನಾಯಕ ವಿದ್ಯಾಭಿವೃದ್ಧಿ ಸಂಘ, ನಾಯಕರ ವಿದ್ಯಾರ್ಥಿ ನಿಲಯ, ಈಜುಗೊಳದ ರಸ್ತೆ, ಸರಸ್ವತಿಪುರಂ, ಮೈಸೂರು ಇಲ್ಲಿಗೆ ಸಲ್ಲಿಸುವಂತೆ ಕಾರ್ಯದರ್ಶಿ ಎಂ.ಪುಟ್ಟಣ್ಣ ತಿಳಿಸಿದ್ದಾರೆ. ಮೊ. 9449272244 ಸಂಪರ್ಕಿಸಬಹುದು.
ಸಾಕ್ಷ್ಯಚಿತ್ರ ಪ್ರದರ್ಶನ
ಕುಲಾಂತರಿ ತಂತ್ರಜ್ಞಾನಕ್ಕೆ ದಕ್ಷಿಣದ ಪ್ರತಿಕ್ರಿಯೆ ಸಂಸ್ಥೆಯು ಬಿಟಿ ಹತ್ತಿಯ ಕುರಿತು ಜ.23 ರಿಂದ ಜಿಲ್ಲೆಯ ಎಚ್.ಡಿ. ಕೋಟೆ, ಹುಣಸೂರು ಮತ್ತು ನಂಜನಗೂಡು ತಾಲೂಕುಗಳಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನದ ಮೂಲಕ ಅರಿವು ಮೂಡಿಸಲಿದೆ. 24ರ ಬೆಳಗ್ಗೆ 10ಕ್ಕೆ ಸಾವಯವ ಕೃಷಿ ಸಂಘ, ಮೈರಾಡ ಆವರಣದಲ್ಲಿ, ಅಂದು ಸಂಜೆ 6ಕ್ಕೆ ಜಕ್ಕಳ್ಳಿಯ ಶ್ರೀ ಗುರುಮಲ್ಲೇಶ್ವರ ದಾಸೋಹ ಮಠ, ಜ.25ರ ಸಂಜೆ 5ಕ್ಕೆ ಎಲಮತ್ತೂರು ದೇವಸ್ಥಾನದ ಆವರಣ, ಜ.26ರ ಸಂಜೆ 5.30ಕ್ಕೆ ಸಾಗರೆಯ ಮಾರಮ್ಮನ ದೇವಸ್ಥಾನ, ಜ.27ರ ಸಂಜೆ 5.30ಕ್ಕೆ ಸರಗೂರಿನ ಸಮುದಾಯ ಭವನ, ಜ.28ರ ಸಂಜೆ 6ಕ್ಕೆ ನಂಜನಗೂಡು ತಾಲೂಕು ಹೆಡಿಯಾಲ, ಫೆ.1ಕ್ಕೆ ಹುಣಸೂರು ತಾಲೂಕು ಗದ್ದಿಗೆ ದೇವಸ್ಥಾನ ಆವರಣ, ಫೆ.4ರ ಸಂಜೆ 6ಕ್ಕೆ ರತ್ನಪುರಿ ವಿಎಸ್ಎಸ್ಎನ್ ಬ್ಯಾಂಕ್ ಎದುರು , ಫೆ.6 ಗುರುಪುರ ಶಾಲಾವರಣದಲ್ಲಿ ಏರ್ಪಡಿಸಲಾಗಿದೆ.