ಮೈಸೂರು: ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ 116ನೇ ಜಯಂತಿ ಅಂಗವಾಗಿ ಮೈಸೂರು ವಿವಿ ನೇತಾಜಿ ಜನ್ಮಶತಮಾನೋತ್ಸವ ಸಮಿತಿಯಿಂದ ಮಾನಸಗಂಗೋತ್ರಿಯ ಗ್ರಂಥಾಲಯದಲ್ಲಿ ರಾಷ್ಟ್ರೀಯ ನಾಯಕರ ಗ್ರಂಥ ಪ್ರದರ್ಶನ ಏರ್ಪಡಿಸಲಾಗಿತ್ತು. ಮೇಯರ್ ಎಂ.ಸಿ. ರಾಜೇಶ್ವರಿ ಉದ್ಘಾಟಿಸಿದರು. ಸ್ವಾತಂತ್ರ್ಯ ಹೋರಾಟಗಾರ ಎಸ್.ಡಿ. ಜಗದೀಶ್, ಪತ್ರಿಕೋದ್ಯಮಿ ರಾಜಶೇಖರ ಕೋಟಿ, ಗ್ರಂಥಪಾಲಕ ರಾಮಶೇಷ್, ಕಾಂಗ್ರೆಸ್ ಮುಖಂಡ ಡಾ.ಬಿ.ಜೆ. ವಿಜಯ್‌ಕುಮಾರ್, ಗ್ರಂಥಪಾಲಕಿ ಡಾ.ಸರಸ್ವತಿ ಇದ್ದರು