ಮೈಸೂರು: ವರ್ತುಲ ರಸ್ತೆಯಲ್ಲಿ ಹೋಗುತ್ತಿದ್ದ ವೃದ್ಧೆಯ ಸರವನ್ನು ಬೈಕಿನಲ್ಲಿ ಬಂದ ವ್ಯಕ್ತಿಗಳು ಕಸಿದುಕೊಂಡು ಹೋಗಿರುವ ಘಟನೆ ಬುಧವಾರ ನಡೆದಿದೆ. ನಿಂಗಮ್ಮ ಎಂಬವರು ಸಾತಗಳ್ಳಿ ವರ್ತುಲ ರಸ್ತೆಯಲ್ಲಿರುವ ನಾರಾಯಣ ಹೃದಯಾಲಯ ಬಳಿ ಹೋಗುತ್ತಿದ್ದಾಗ ಬೈಕಿನಲ್ಲಿ ಬಂದ ವ್ಯಕ್ತಿಗಳು 40 ಗ್ರಾಂ. ಚಿನ್ನದ ಸರ ಎಗರಿಸಿದ್ದಾರೆ. ಎನ್.ಆರ್. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.