ಮೈಸೂರು
ಕಾಲೇಜಲ್ಲಿ ಶೌಚಾಲಯ ನಿರ್ಮಾಣಕ್ಕೆ ಐಟಿಸಿ ನೆರವು
ಹುಣಸೂರು: ಐಟಿಸಿ ಕಂಪನಿ ವತಿಯಿಂದ ತಾಲೂಕಿನ ಹನಗೋಡು ಸರ್ಕಾರಿ ಪದವಿಪೂರ್ವ ಕಾಲೇಜಿಗೆ 1 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದ ಶೌಚಾಲಯ ಕಟ್ಟಡವನ್ನು ಹಸ್ತಾಂತರಿಸಿದರು.
ಐಟಿಸಿ ಕಂಪನಿ ವ್ಯವಸ್ಥಾಪಕ ಚಂದ್ರಯ್ಯ ಮಾತನಾಡಿ, ಐಟಿಸಿ ಕಂಪನಿಯು ತನ್ನ ವ್ಯಾಪಾರೋದ್ಯಮದ ಜೊತೆಗೆ ಸಾಮಾಜಿಕ ಸೇವಾ ಕಾರ್ಯವನ್ನು ಕೈಗೊಂಡಿದೆ. ಶಾಲಾ-ಕಾಲೇಜುಗಳಿಗೆ ಡೆಸ್ಕ್ ಇನ್ನಿತರ ಪೀಠೋಪಕರಣಗಳನ್ನು ನೀಡುತ್ತಿದೆ. ದೇಶದಲ್ಲಿ ಸಾಕ್ಷರರು ಹೆಚ್ಚಾಗಬೇಕೆಂಬುದು ಇದರ ಮೂಲ ಉದ್ದೇಶ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲೆ ಜಯಮ್ಮ ಐಟಿಸಿ ಕಂಪನಿಯ ಸೇವೆಗಾಗಿ ಅಭಿನಂದಿಸಿದರು. ಭೂ ನ್ಯಾಯಮಂಡಳಿ ಸದಸ್ಯ ಎಚ್.ಎಸ್. ಸುರೇಶ್, ಐಟಿಸಿಯ ಸಹ ವ್ಯವಸ್ಥಾಪಕ ಪೂರ್ಣೇಶ್, ಮೇಲ್ವಿಚಾಕರ ಶಶಿ, ಕಂಪ್ಲಾಪುರ ಪ್ಲಾಟಾ ಫಾರಂನ ಮೇಲ್ವಚಾರಕ ಪ್ರದೀಪ್, ಗ್ರಾಮದ ಕ್ಷೇತ್ರ ಸಹಾಯಕ ಮಧು, ಕೃಷ್ಣಕುಮಾರ್, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಇದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ