ಮೈಸೂರು: ಬನ್ನಿಮಂಟಪದ ಬಾಲಭವನದ ಬಳಿ ಅಸ್ವಸ್ಥಗೊಂಡು ಕೆ.ಆರ್. ಆಸ್ಪತ್ರೆಗೆ ದಾಖಲಾಗಿದ್ದ ಅಪರಿಚಿತ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಚಹರೆ- 45 ವರ್ಷ, 5.2 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ, ಬಲ ಎದೆಯ ಮೇಲೆ ಮಂಚಿ, ಎಡ ಎದೆಯ ಮೇಲೆ ಲಲಿತಾ ಎಂಬ ಹಚ್ಚೆ ಇದೆ. ಮೃತರ ವಾರಸುದಾರರು ಇದ್ದಲ್ಲಿ ದೂ.0821- 2418112/312 ಸಂಪರ್ಕಿಸಿ.