ಒಳಚರಂಡಿ ಸಮಸ್ಯೆಗೆ ಮುಕ್ತಿ ಎಂದು?

Updated on: 

ಮೈಸೂರು: ನಗರಪಾಲಿಕೆಯ 51 ರಿಂದ 55ನೇ ವಾರ್ಡ್ ವ್ಯಾಪ್ತಿಯಲ್ಲಿ ಒಳಚರಂಡಿ ಸಮಸ್ಯೆ ಹೆಚ್ಚಾಗಿದೆ. ಮಾಜಿ ಮೇಯರ್ ಅಯೂಬ್ ಖಾನ್ ಪ್ರತಿನಿಧಿಸುವ 52ನೇ ವಾರ್ಡ್‌ನಲ್ಲಿ ಒಳಚರಂಡಿ ಸಮಸ್ಯೆ ಅಷ್ಟಾಗಿಲ್ಲ.
ಆದರೆ, ಉಳಿದ ವಾರ್ಡ್‌ಗಳಲ್ಲಿ ಈ ಸಮಸ್ಯೆಯೇ ಪಾಲಿಕೆ ಸದಸ್ಯರನ್ನು ಕಾಡುತ್ತಿದೆ.
ಇದರ ಜೊತೆಯಲ್ಲಿ ಅಲ್ಲಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಇದೆ. ಹದಗೆಟ್ಟಿರುವ ರಸ್ತೆಗಳ ದುರಸ್ತಿ ಆಗಬೇಕಿದೆ.
ಉದ್ಯಾನಗಳ ಅಭಿವೃದ್ಧಿ, ನಿರ್ವಹಣೆ ಮಾಡಬೇಕಿದೆ. ಕೆಟ್ಟಿರುವ ಬೀದಿ ದೀಪಗಳನ್ನು ಸರಿಪಡಿಸಬೇಕಿದೆ. 51ನೇ ವಾರ್ಡ್‌ನ ಎಸ್. ಸ್ವಾಮಿ, 53ನೇ ವಾರ್ಡ್‌ನ ಫೈರೋಜ್ ಖಾನ್ ಹಾಗೂ 55ನೇ ವಾರ್ಡ್‌ನ ಶೌಕತ್ ಪಾಷ ಇದೇ ಮೊದಲ ಬಾರಿಗೆ ಸದಸ್ಯರಾಗಿದ್ದಾರೆ.
52ನೇ ವಾರ್ಡ್‌ನ ಅಯೂಬ್ ಖಾನ್ ಅವರು ಕಳೆದ ಬಾರಿ ಗೆದ್ದು ಮೇಯರ್ ಸಹ ಆಗಿದ್ದರು. 54ನೇ ವಾರ್ಡ್‌ನ ಅಯಾಜ್ ಪಾಷ ಅ. ಪಂಡು 2ನೇ ಬಾರಿಗೆ ಆಯ್ಕೆಯಾಗಿದ್ದಾರೆ.

ಗಾಂಧಿನಗರ 10ನೇ ಕ್ರಾಸ್ ಕೆಳಭಾಗದಿಂದ ವಿನ್ನರ್ ಮಿಲ್, ಇಂದಿರಾ ಕಾಲೋನಿ, ಸತ್ಯನಗರ, ನೆಹರು ಪಾರ್ಕ್, ಮುನೇಶ್ವರ ಬಡಾವಣೆ, ಸಣ್ಣಪ್ಪ ತೋಟ, ಎಜೆ ಬ್ಲಾಕ್ ಈ ವಾರ್ಡ್ ವ್ಯಾಪ್ತಿಗೆ ಸೇರುತ್ತದೆ. ಇಲ್ಲೂ ನೀರಿನ ಸಮಸ್ಯೆ ಇದೆ. ಜತೆಗೆ ರಸ್ತೆ ಅಭಿವೃದ್ಧಿ ಕೂಡ ಆಗಿಲ್ಲ. ಒಳಚರಂಡಿಯಲ್ಲಿ ಅಲ್ಲಲ್ಲಿ ಅಡಚಣೆ ಉಂಟಾಗಿ ನಿವಾಸಿಗಳಿಗೆ ತೊಂದರೆ ಆಗುತ್ತಿದೆ. ಯುಜಿಡಿಗೆ ಕೇವಲ 6 ಇಂಚು ಪೈಪ್ ಹಾಕಿರುವುದರಿಂದ ಈ ತೊಂದರೆ ಉಂಟಾಗಿದ್ದು, ಇದನ್ನು ಸರಿಪಡಿಸಿದ ಬಳಿಕ ರಸ್ತೆ ಅಭಿವೃದ್ಧಿಪಡಿಸಲಾಗುವುದು. ಮಾದರಿ ವಾರ್ಡ್ ಆಗಿಸಲು ಶ್ರಮಿಸುತ್ತೇನೆ.

ಉದಯಗಿರಿ 2ನೇ ಹಂತ, ಶಾಂತಿನಗರ, ಮುನೇಶ್ವರನಗರ, ರಾಜೀವ್‌ನಗರ ಕೆಲವು ಭಾಗಗಳು ಈ ವಾರ್ಡ್ ವ್ಯಾಪ್ತಿಗೆ ಸೇರುತ್ತವೆ.
ವಾರ್ಡ್‌ನಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ವಾರ್ಡ್‌ನ ಕೆಲವು ಭಾಗಗಳಲ್ಲಿ ಮಾತ್ರ ನೀರಿನ ಸಮಸ್ಯೆ ಇದೆ.
ರಸ್ತೆ, ಉದ್ಯಾನ, ಒಳಚರಂಡಿ ಸೇರಿದಂತೆ ಎಲ್ಲವನ್ನೂ ಅಭಿವೃದ್ಧಿಪಡಿಸಿ ನಗರಕ್ಕೆ ಮಾದರಿ ವಾರ್ಡ್ ಮಾಡಿದ್ದೇನೆ. ಮತ್ತಷ್ಟು ಅಭಿವೃದ್ಧಿ ಕೆಲಸ ಕೈಗೊಳ್ಳುತ್ತೇನೆ.

ರಾಜೀವ್‌ನಗರ 1, 2 ಮತ್ತು 3ನೇ ಹಂತ, ಲಿಡ್ಕರ್ ಕಾಲೋನಿ, ಕ್ರಿಶ್ಚಿಯನ್ ಕಾಲೋನಿ ಈ ವಾರ್ಡ್‌ಗೆ ಸೇರುತ್ತದೆ. ಒಳಚರಂಡಿ ಸಮಸ್ಯೆ ಹೆಚ್ಚಾಗಿದೆ. ಮೋರಿ ಸ್ವಚ್ಛತೆ ಆಗಿಲ್ಲ.
ಮುಖ್ಯರಸ್ತೆಗಳು ಮಾತ್ರ ಅಭಿವೃದ್ಧಿ ಆಗಿದ್ದು, ವಾರ್ಡ್‌ನ ಒಳ ರಸ್ತೆಗಳು ಅಭಿವೃದ್ಧಿ ಆಗಿಲ್ಲ. ಬೀದಿದೀಪ ಸಮಸ್ಯೆ ಹೆಚ್ಚಾಗಿದೆ.
ನೀರಿನ ಸಮಸ್ಯೆ ಹೆಚ್ಚಾಗಿಲ್ಲ. ಎಲ್ಲಾ ಸಮಸ್ಯೆಗಳ ಅರಿವಿದ್ದು, ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸುತ್ತೇನೆ.

ಶಾಂತಿನಗರ, ಗೌಸಿಯಾನಗರ, ರಾಜೀವ್ ನಗರದ ಕೆಲವು ಭಾಗಗಳು ಈ ವಾರ್ಡ್‌ಗೆ ಸೇರುತ್ತವೆ. ಶಾಂತಿನಗರ ಮತ್ತು ಗೌಸಿಯಾನಗರದಲ್ಲಿ ನೀರಿನ ಸಮಸ್ಯೆ, ಒಳಚರಂಡಿ ವ್ಯವಸ್ಥೆ ಹದಗೆಟ್ಟಿದೆ.
ರಸ್ತೆಗಳ ದುರಸ್ತಿ, ಉದ್ಯಾನ, ಸ್ಮಶಾನಗಳ ಅಭಿವೃದ್ಧಿ ಆಗಬೇಕಿದೆ. ಸ್ವಚ್ಛತೆಗಾಗಿ ಹೆಚ್ಚಿನ ಪೌರಕಾರ್ಮಿಕರ ನಿಯೋಜಿಸಬೇಕಿದೆ. ಗೌಸಿಯಾನಗರ ಮತ್ತು ಶಾಂತಿನಗರದಲ್ಲಿ ಶಿಕ್ಷಣ ಮತ್ತು ಉದ್ಯೋಗ ಅವಕಾಶಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ.

ಕಲ್ಯಾಣಗಿರಿ, ಅಜೀಜ್‌ಸೇಠ್‌ನಗರ, ಕೆಎಸ್‌ಡಿಬಿ ಕಾಲೋನಿ, ಸಾತಗಳ್ಳಿ ಬಡಾವಣೆ ಕೆಲವು ಭಾಗ ಈ ವಾರ್ಡ್ ವ್ಯಾಪ್ತಿಗೆ ಬರುತ್ತವೆ. ಈ ಬಡಾವಣೆಗಳು ಪಾಲಿಕೆ ವ್ಯಾಪ್ತಿಗೆ ಸೇರಿ 15 ವರ್ಷಗಳಾಗಿವೆ. ಆದರೆ, ಪಾಲಿಕೆಯೂ ಸರಿಯಾಗಿ ನಿರ್ವಹಣೆ ಮಾಡದೆ, ಮೂಲ ಸೌಲಭ್ಯ ಒದಗಿಸಿದೇ ಜವಾಬ್ದಾರಿ ಮರೆತಿದೆ. ನೀರು, ಒಳಚರಂಡಿ, ಬೀದಿದೀಪ, ರಸ್ತೆಗಳು... ಹೀಗೆ ಹಲವಾರು ಸಮಸ್ಯೆಗಳಿವೆ. ಕಲ್ಯಾಣಗಿರಿಯಲ್ಲಿ ರಸ್ತೆ, ಉದ್ಯಾನ ಅಭಿವೃದ್ಧಿ ಆಗಬೇಕಿದೆ. ಕೆಲವು ಭಾಗದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಎಲ್ಲಾ ಸಮಸ್ಯೆಗಳ ಬಗ್ಗೆ ಈಗಾಗಲೇ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com